ಹೂವಿನ ಹಡಗಲಿ

ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ಹೇಳಿಕೆ ; ಕ್ರಮಕ್ಕೆ ಆಗ್ರಹ

ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ಹೇಳಿಕೆ ;  ಕ್ರಮಕ್ಕೆ ಆಗ್ರಹ

 ಹೂವಿನಹಡಗಲಿ  12 : ಇಲ್ಲಿನ  ಪಾಶ್ವನಾಥ ಚಾರಿಟೇಬಲ್ ಟ್ರಸ್ಟ್‌ ಹಾಗೂ ಭಾರತೀಯ ಜೈನ್ ಮಿಲನ್ ಮತ್ತು ಜ್ವಾಲಾಮಾಲಿನಿ ಮಹಿಳಾ ಜೈನ ಸಮಾಜ ವತಿಯಿಂದ  ಶ್ರೀ ಕ್ಷೇತ್ರ ಧರ್ಮಸ್ಥಳದ  ವೀರೇಂದ್ರ ಹೆಗಡೆಯವರಿಗೆ ಹಾಗೂ ಜೈನ ಸಮಾಜದ ಬಗ್ಗೆ ಅವಹೇಳನಕಾರಿ ಹಾಗೂ ಯೂಟ್ಯೂಬ್ ನಲ್ಲಿ ಅವರ ಬಗ್ಗೆ ಇಲ್ಲಸಲ್ಲದ ಆಪಾದನೆ ಮಾಡುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ತಹಶಿಲ್ದಾರರ ಸಂತೋಷ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷ ಎಚ್‌ಎಸ್ ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್, ಭಾರತೀಯ ಜೈನ್ ಮಿಲನ ಅಧ್ಯಕ್ಷರಾದ ಸಂತೋಷ್ ಜೈನ್, ಜ್ವಾಲಾ ಮಾಲಿನಿ ಮಹಿಳಾ ಜೈನ ಸಂಘದ ಅಧ್ಯಕ್ಷೆ ಡಿ ಪದ್ಮಾವತಿ, ಸಮಾಜದ ಕಾರ್ಯದರ್ಶಿ ಪದ್ಮರಾ ಜೈನ್, ಖಜಾಂಚಿ, ಬಾಗೇಶ್ ಜೈ, ತವನಪ್ಪ. ಎಂ.ಅಜಿತ್ ಎಚ್ ಡಿ, ಅಮಿತ್ , ಹೆಚ್ ಜೆ, ರಾಯಪ್ಪ ಎಚ್ ಡಿ, ಡಿ ನಾಗರಾಜ್, ಬಾಹುಬಲಿ ಪಾಟೀಲ್ ಪಾರ್ಶ್ವನಾಥ ರೇವಡಿ ,ಪದ್ಮರಾಜ್, ಜೆ ಎಸ್ ನಾಗರಾಜ್, ಮಹಿಳಾ ಸಂಘದ ಉಪಾದ್ಯಕ್ಷೆ ಜಯಶ್ರೀ ಮಂಜುನಾಥ್, ಕಾರ್ಯದರ್ಶಿ ಜಂಪ ರಾಯಪ್ಪ, ಖಜಾಂಚಿ, ಮೇಘ, ವೈಶಾಲಿಅಮಿತ್ ಲತಾ.ಸಂತೋಷ,  ಸವಿತಾ ವಿಜಯಕುಮಾರ್, ಹೇಮಾ ಪದ್ಮರಾಜ್,  ಶೃತಿ ಬಾಹುಬಲಿ, ವಿಂದ್ಯ ಪ್ರಸನ್ನ, ಪದ್ಮ ಅಜಿತ್, ಸುಚೇತನ, ಅನುಷಾ ಪದ್ಮರಾಜ್ ಜ್ವಾಲಾ ನಾಗರಾಜ್, ರೇಣುಕಾ ಶಾಂತರಾಜ್, ಇನ್ನೂ ಅನೇಕ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು 


ಸುದ್ದಿ ಓದಿ