ಗೋಕಾಕ್

ಉಪ ಸಂಪಾದಕರು ಪತ್ರಿಕೆಯ ಬೆನ್ನೆಲುಬು : ಹಿರಿಯ ಪತ್ರಕರ್ತ ಘೋಡಗೇರಿ ಬಸು

ಉಪ ಸಂಪಾದಕರು ಪತ್ರಿಕೆಯ ಬೆನ್ನೆಲುಬು : ಹಿರಿಯ ಪತ್ರಕರ್ತ ಘೋಡಗೇರಿ ಬಸು

ಗೋಕಾಕ 16: ಅನೇಕ ಇತರ ವೃತ್ತಿಗಳಂತೆ ಪತ್ರಿಕೋದ್ಯಮವು ಸಹ ಒಂದು ಸಂಘಟಿತ ಶಿಸ್ತಾದ ಉದ್ಯೋಗವಾಗಿ ಹೊರಹೊಮ್ಮಿದೆ. ಒಂದು ಪತ್ರಿಕೆ ನಿತ್ಯ ಪ್ರಕಟವಾಗಿ ಓದುಗರ ಕೈಸೇರಲು ಸಾವಿರಾರು ಶ್ರಮಿಕರ ಬೆವರಿದೆ. ಅದರಲ್ಲೂ ಪತ್ರಿಕೆ ಬೆಳವಣಿಗೆಯಲ್ಲಿ ಉಪ ಸಂಪಾದಕರ ಪಾತ್ರ ಬಹು ದೊಡ್ಡದು ಎಂದು ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತ ಘೋಡಗೇರಿ ಬಸು ಅಭಿಪ್ರಾಯ ಪಟ್ಟರು.  

ಯರಗಟ್ಟಿ ಪಟ್ಟಣದ ಗೋಕಾಕ ರಸ್ತೆಗೆ ಹೊಂದಿಕೊಂಡಿರುವ ಶ್ರೀ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವ ಹಾಗೂ 15 ನೇ ವರ್ಷದ ವೇದಾಂತ ಪರಿಷತ್ ಮತ್ತು ಪೂಜ್ಯ ಗಣಪತಿ ಮಹಾರಾಜರ 63 ನೇ ಜಯಂತೋತ್ಸವ , ಮಹಾತ್ಮರ ಬೆಳ್ಳಿ ರಥೋತ್ಸವ ಹಾಗೂ ಶ್ರೀ ದೇವಿಯ ರಥೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ತಮ್ಮ ವೃತ್ತಿ ಬದುಕಿನ 37 ವವರ್ಷದ ಅನುಭವನ್ನ್ತು ಹಂಚಿಕೊಂಡು ಮಾತನಾಡಿದ ಅವರು,  ಯಾವುದೇ ಸುದ್ದಿ ಸಂಸ್ಥೆಗಳು ಬೆಳವಣಿಗೆಯಲ್ಲಿ ಉಪ ಸಂಪಾದಕರು ಇರಲೇಕು. ತಮ್ಮ ವ್ಯಾಪ್ತಿಗೆ ಬರುವ ನೂರಾರು ಭಾಗದ  ವರದಿಗಾರರಿಂದ ಹೆಚ್ಚಿನ ಸಂಖ್ಯೆಯ ಸುದ್ದಿಗಳನ್ನು ಸ್ವೀಕರಿಸುತ್ತಾರೆ. ಅವರು ಪತ್ರಿಕಾ ಪ್ರಕಟಣೆಗಳು ಮತ್ತು ಕರಪತ್ರಗಳನ್ನು ಸಹ ಸ್ವೀಕರಿಸುತ್ತಾರೆ. ಆದರೆ ಆ ಎಲ್ಲ  ಸುದ್ದಿಗಳನ್ನು ಅವರು ಪ್ರಕಟಿಸುವಂತಿಲ್ಲ. ಆದ್ದರಿಂದ, ಅವರು ಪ್ರಮುಖ ಮತ್ತು ಆಸಕ್ತಿದಾಯಕ ಸುದ್ದಿ ವರದಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯ ನಂತರ ಅವರು ಸುದ್ದಿಯನ್ನು ಸರಿಯಾಗಿ ಸಂಪಾದಿಸುತ್ತಾರೆ. ಪರಿಷ್ಕರಣೆ ಮತ್ತು ಸಂಪಾದನೆಯ ಕಾರ್ಯವನ್ನು ಉಪ-ಸಂಪಾದನೆ ಎಂದು ಕರೆಯಲಾಗುತ್ತದೆ. ತಪ್ಪಾದ ಅಭಿವ್ಯಕ್ತಿಗಳು, ಕೆಟ್ಟ ವ್ಯಾಕರಣ ರೂಪಗಳು, ತಪ್ಪಾದ ಕಾಗುಣಿತಗಳು ಮತ್ತು ಇತರ ದೋಷಗಳನ್ನು ಉಪ-ಸಂಪಾದನೆಯ ಸಮಯದಲ್ಲಿ ತೆಗೆದುಹಾಕಬೇಕು ಮತ್ತು ಪರಿಷ್ಕರಿಸಬೇಕು ಆವಾಗ ಮಾತ್ರ ಒಂದು ಪತ್ರಿಕೆ ಶುದ್ಧ ಹಾಗೂ ಸಮಗ್ರವಾಗಿ ಹೊರಬರಲು ಸಾಧ್ಯ ಆದ್ದರಿಂದ ಉಪಸಂಪಾದಕರನ್ನು ಅವರ ಪ್ರಮುಖ ಕೆಲಸದಿಂದಾಗಿ ಪತ್ರಿಕೆಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ ಎಂದು ವರದಿಗಾರರಿಗೂ ಮತ್ತು ಉಪ ಸಂಪಾದಕರ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿದರು.  

ಒಬ್ಬ ಮನುಷ್ಯ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಆತನಲ್ಲಿ ವಿನಯ ಇಲ್ಲದಿದ್ದರೆ ಆತನ ಬಹುಕೇ ವ್ಯರ್ಥವಾಗುತ್ತದೆ. ವಿನಯವಿಲ್ಲದ ವಿದ್ಯೆ ಇದ್ದರೇನು..? ಇಲ್ಲದಿದ್ದರೇನು..? ಎಂದು ಮಾರ್ಮಿಕವಾಗಿ ನುಡಿದರು.   

ಸರಳತೆಯೇ ಸೌಭಾಗ್ಯ.. ಸರಳತೆಯೇ ಸೌಂದರ್ಯ_. ಸರಳತೆಯಿಂದ ಸರಳತೆಯ ಬದುಕಿನಿಂದ ಸಕಲ ಸಿದ್ದಿ ಪ್ರಾಪ್ತಿಯಾಗುತ್ತದೆ. ಕಠೋರ ಜಪ ತಪಗಳಿಂದ ನಿಷ್ಠುರವಾಗಿ ಧಾರ್ಮಿಕ ಕಾರ್ಯಕೈಗೊಂಡು ಮಂತ್ರಿ ಸಿದ್ಧಿಯೊಂದಿಗೆ ವಾಕ್ ಸಿದ್ಧಿಯನ್ನು ದೇವಿಯ ಕೃಪೆಯಿಂದ ಪಡೆದಿರುವ ವಾಕ್‌ಸಿದ್ದಿ ಪುರುಷ ಶ್ರೀ ಗಣಪತಿ ಮಹಾರಾಜರ ಸರಳತೆಯ ಬದುಕು  ಕೆಲ ಮಠಾಧೀಶರಿಗೆ ಮಾದರಿಯಾಗಿದೆ ಎಂದು ಸಲಹೆ ನೀಡಿದರು. 

ವೇದಿಕೆಯ ಮೇಲೆ ಅನೇಕ ಮಠಾಧೀಶರು, ಗುರುಹಿರಿಯರು ಪತ್ರಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ