ಯರಗಟ್ಟಿ

ಡೆಂಘ್ಯೂ ಜ್ವರ, ಡಯೇರಿಯಾ ತಡೆಗಟ್ಟುವಿಕೆ ಜಾಗೃತಿ

ಡೆಂಘ್ಯೂ ಜ್ವರ, ಡಯೇರಿಯಾ ತಡೆಗಟ್ಟುವಿಕೆ ಜಾಗೃತಿ

ಯರಗಟ್ಟಿ 18: ಪಟ್ಟಣ ಪಂಚಾಯತ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಗುರುವಾರ ಡೆಂಘ್ಯೂ ಜ್ವರದ ಮತ್ತು ಡಯೇರಿಯಾ ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕ್ಷೇತ್ರ ಆರೋಗ್ಯ ಶಿಕ್ಷ ಣಾಧಿಕಾರಿ ಆಯ್‌. ಆರ್‌. ಮಾತನಾಡಿ, ಡಯೇರಿಯಾ, ಡೆಂಗೆ ಮತ್ತು ಚಿಕನ್ ಗುನ್ಯ ಹರಡಲು ಪ್ರಮುಖ ಕಾರಣ ಈಡಿಸ್ ಸೊಳ್ಳೆ. ಇವು ಹೆಚ್ಚಾಗಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿವೆ. ನೀರಿನ ಟ್ಯಾಂಕರ್, ಬಿಂದಿಗೆ ಸ್ವಚ್ಛಗೊಳಿಸುತ್ತ, ಸದಾ ಮುಚ್ಚಿಡುವ ಮೂಲಕ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕು ಎಂದರು. 

ಡೆಂಗೆ ರೋಗ ತಡೆ ತಾಲೂಕಾ ಸಮನ್ವಯ ಸಮಿತಿ ಸಭೆ ನಡೆಸಿ, ರೋಗ ಹರಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಿದರು. ಡೆಂಗ್ಯೂ ತಡೆ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಡೆಂಗ್ಯೂಗೆ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆ ಇಲ್ಲದಿರುವುದರಿಂದ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಇಲಾಖೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗರಿಷ್ಠ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ ಹೇಳಿದರು. 

ಪ. ಪಂ. ಕಿರಿಯ ಆರೋಗ್ಯ ನಿರಿಕ್ಷಕ ಪ್ರಕಾಶಗೌಡ ಪಾಟೀಲ, ದ್ವಿತೀಯ ಲೆಕ್ಕಸಹಾಯಕ ಆನಂದ ಬೆಳವಿ, ರೇಣುಕಾ ಹಲಗಿ, ಪಾರ್ವತಿ ಪಟ್ಟಣಶೆಟ್ಟಿ, ಅಡಿವೆಪ್ಪ ಇಟ್ಟಗೌಡ್ರ, ರಾಜು ಹಿರೇಮಠ, ಮಲಿಕ ಸಿಕ್ಕಲಗಿ, ಅಂಗನವಾಡಿ ಮೇಲ್ವಿಚಾರಕಿ ಎಮ್‌. ಎಸ್‌. ಮುಗಳಿಹಾಳ, ಅಂಗನವಾಡಿ ಕಾರ್ಯಕರ್ತರಾದ ಜಿ. ಆರ್‌. ದಯನ್ನವರ, ಎಂ. ಎಂ. ಹೊರಟ್ಟಿ, ಎಲ್ ಡಿ. ಕರ್ಜಗಿಮಠ,  ಎಚ್‌. ಸಿ. ಹುಕ್ಕೇರಿ ಶಿಕ್ಷಕರಾದ ಬಿ. ಎಂ. ಸರದಾರ, ಆರ. ಕೆ. ಹುಣಶಿಕಟ್ಟಿ, ಎಂ. ಎನ್‌. ಚವಡಪ್ಪನವರ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ