ಏಳು ತಾಸು ಉಚಿತ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಮನವಿ
ಶಿಗ್ಗಾವಿ 18: ರೈತರ ಬೋರವೆಲ್‌ಗಳಿಗೆ ಮೊದಲಿನಂತೆಯೇ 7 ತಾಸು ಉಚಿತ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಪ್ರತಿಭಟಿಸಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಅರ್ಿಸಿದರು.
ಕಿತ್ತೂರಾಣಿ ಚನ್ನಮ್ಮ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸಾಗಿ ಕೆಇಬಿ ಎದುರು ಸುಮಾರು 2 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ದ ರೈತರು ತೀರ್ವ ಅಕ್ರೋಷ ಹೊರಹಾಕಿದರು.
ಶಿಗ್ಗಾವಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ಈಗಿನ ಸರಕಾರದ ಆದೇಶದ ಪ್ರಕಾರ ಹಗಲು 3 ಘಂಟೆ, ರಾತ್ರಿ 2 ಘಂಟೆ ಉಚಿತ ವಿದ್ಯುತ್‌ನ್ನು ಪೂರೈಸುತ್ತಿದ್ದು, ಮೊದಲಿನಂತೆಯೇ ಹಗಲು ಹೊತ್ತಿನಲ್ಲಿಯೇ 7 ತಾಸು ರೈತರಿಗೆ ಉಚಿತ ವಿದ್ಯುತ್‌ನ್ನು ಪೂರೈಸಬೇಕೆಂದು ಒತ್ತಾಯಿಸಿದರು, ಸಮರ್ಕ ಮಳೆ ಬಾರದೇ ಇರುವುದರಿಂದ ರೈತರ ಬೆಳೆಗಳು ಸರಿಯಾಗಿ ಬಾರದೇ ಇರುವುದರಿಂದ, ದನಕರುಗಳಿಗೆ ಮೇವಿನ ಕೊರತೆ ಹಾಗೂ ಬರುವ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಸಾದ್ಯತೆ ಇದೆ ಹೀಗಾಗಿ ರೈತರಿಗೆ ಹಗಲು ಹೊತ್ತಿನಲ್ಲಿಯೇ 1 ನಾನು ವಿದ್ಯುತ್ತನ್ನು ಪೂರೈಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ್, ಉಪಾಧ್ಯಕ್ಷ ಹನುಮಂತ ದೊಡ್ಡಮನಿ, ತಾಲೂಕ ಅಧ್ಯಕ್ಷ ಆನಂದ ಕೆಳಗಿನಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ್, ಕಾರ್ಯದರ್ಶಿ ಗೀರೀಶ ಪಾಟೀಲ್, ಬಸಲಿಂಗಪ್ಪ ನರಗುಂದ, ಈರಣ್ಣ ಸಮಗೊಂಡ, ಮಂಜುನಾಥ್ ಕಂಕನವಾಡ, ರುದ್ರ್ಪ ಬಳಿಗಾರ, ದೊಡ್ಡೂರು ರಮೇಶ, ಬಸವರಾಜ್ ತಳವಾರ್ ಸೇರಿದಂತೆ ರೈತರು ಇದ್ದರು.