ಸೌಂದತ್ತಿ

ಬಲದಂಡೆ ಕಾಲುವೆ ಮುಖಾಂತರ ನೀರು ಹರಿಸಲು ಒತ್ತಾಯಿಸಿ ಮನವಿ

ಬಲದಂಡೆ ಕಾಲುವೆ ಮುಖಾಂತರ ನೀರು ಹರಿಸಲು ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಸವದತ್ತಿ 20: ಸರಿಯಾಗಿ ಮಳೆಯಾಗದೆ ತಾಲೂಕಿನಾದ್ಯಂತ ಬರಗಾಲ ಆವರಿಸಿರುವದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೂಡಲೆ ಬಲದಂಡೆ ಕಾಲುವೆ ಮುಖಾಂತರ ನೀರು ಬಿಡಬೇಕೆಂದು ಒತ್ತಾಯಿಸಿ ಶುಕ್ರವಾರದಂದು ಚುಳಕಿ ಭಾಗದ ರೈತರು ಗ್ರೇಡ್-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳರವರಿಗೆ ಮನವಿ ಸಲ್ಲಿಸಿದರು.

ಚುಳಕಿ ಪಿಕೆಪಿಎಸ್ ಅಧ್ಯಕ್ಷ ಗಿರೀಶ ಭೀಮರಡ್ಡಿ ಮಾತನಾಡಿ, ಈ ಹಿಂದೆ ಬಲದಂಡೆ ಕಾಲುವೆ ಮುಖಾಂತರ ಅಲ್ಪ ಪ್ರಮಾಣದ ನೀರನ್ನು ಹರಿಸಲಾಗಿದ್ದು, ಅದು ಯಾವ ರೈತರಿಗೂ ಅನುಕೂಲವಾಗದೆ ಹೋಗಿರುವದರಿಂದ ಸಾಕಷ್ಟು ತೊಂದರೆಯಾಗಿದೆ. ತಕ್ಷಣ ಚುಳಕಿ ಭಾಗಕ್ಕೆ ಮಲಪ್ರಭಾ ಬಲದಂಡೆ ಕಾಲುವೆ ಮುಖಾಂತರ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೆ ನೀರು ಹರಿಸುವ ಕಾರ್ಯ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದ್ದು, ಈ ಮನವಿಯನ್ನು ತಕ್ಷಣ ಪರಿಗಣಿಸದೆ ಹೋದಲ್ಲಿ ಅ.22ರಂದು ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.

ಗಂಗನಗೌಡ ಪಾಟೀಲ, ಶಂಕರ ಮಾಗುಂಡ, ಗಂಗನಗೌಡ ಹುಲ್ಲೂರ, ಕಲ್ಲಪ್ಪ  ಮಾಗುಂಡ, ಹನಮಂತ ಸೊಪ್ಪಡ್ಲ, ಶೇಖನಗೌಡ ಗಂಗನಗೌಡ್ರ, ಮಾರುತಿ ನರಗುಂದ, ಮಲ್ಲಪ ಪೂಜೇರ, ಯಲ್ಲಪ್ಪ ಮಾಗುಂಡ, ಬಸನಗೌಡ ಮುದೇನಕೊಪ್ಪ, ಶಿವಲಿಂಗಪ್ಪ ಮೇಟಿ ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ