ಮುಂಗಾರು ಕೈಕೊಟ್ಟಿದೇ ಆದಷ್ಟು ಬೇಗನೆ ಪೈಪ್ ಕೊಡಿ; ಸಂಗಮೆಶ ಸಗರ ಆಗ್ರಹ
ತಾಳಿಕೋಟಿ25: ತಾಲೂಕಿನ ಕಲಕೇರಿ ಗ್ರಾಮದ ಸುಮಾರು 350 ಕ್ಕೂ ಹೆಚ್ಚಿನ ರೈತರು ಕಳೆದ ವರ್ಷಗಳಲ್ಲಿ 2070 ರಂತೆ ಪ್ರತಿಯೊಬ್ಬರು ಸ್ಪಿಂಕಲರ್ ಪೈಪ್ಗಾಗಿ ಹಣ ತುಂಬಿ ನಿಮ್ಮ ಇಲಾಖೆಗೆ ಅಲೆದಾಡಿ ಅಲೆದಾಡಿ ರೊಸಿ ಹೋಗಿದ್ದಾರೆ, ಕೆಲವರಿಗೆ ಸ್ಪಿಂಕಲರ್ ಪೈಪ್ ಬಂದಿದ್ದು, ಇನ್ನೂ ಉಳಿದ ರೈತರಿಗೆ ಬಂದಿರುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಮಾತನಾಡಿದರು.
ತಾಳಿಕೋಟಿ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡುತ್ತಾ ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದು, ಕಾಲುವೆಗಳಲ್ಲಿ ನೀರು ಬಂದಿರುತ್ತವೆ, ಆದಷ್ಟು ಬೇಗನೆ ಉಳಿದ ರೈತರಿಗೆ ಸ್ಪಿಂಕಲರ್ ಪೈಪ್ ಒದಗಿಸಿದರೆ, ರೈತರಿಗೆ ಅನುಕೂಲವಾಗುತ್ತದೆ. ಎಂದು ಆಗ್ರಹಿಸಿದರು.
ಒಂದು ವಾರದೊಳಗಾಗಿ ಸ್ಪಿಂಕಲರ್ ಪೈಪ್ ವಿತರಿಸದಿದ್ದರೆ, ಸಮಸ್ತ ತಾಳಿಕೋಟಿ ತಾಲೂಕಿನ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ವೇಳೆ ಕಲಕೇರಿ ಅಧ್ಯಕ್ಷ ಶಾಂತಯ್ಯ ಗಣಾಚಾರಿ, ಕಲಕೇರಿ ಹೋಬಳಿ ಅಧ್ಯಕ್ಷರಾದ ಬಾಷಾಸಾಹೇಬ ಮನಗೂಳಿ, ಉಪಾಧ್ಯಕ್ಷರಾದ ಪುಂಡಲಿಕ ಚವ್ಹಾಣ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಪೋಟೊ ವಿವರ 25 ತಾಳಿಕೋಟಿ 2 : ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ರೈತರ ಸ್ಪಿಂಕಲರ್ ಪೈಪ್ ಬಂದಿರುವುದಿಲ್ಲ, ಆದಷ್ಟು ಬೇಗನೆ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.