ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ
ಶಿಗ್ಗಾವಿ 01: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದಿಂದ ತಾಲೂಕಾ ತಹಶೀಲ್ದಾರರ ಮೂಲಕ ಸವನೂರ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಿಸಲಾಯಿತು.
ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ತುರ್ತು ಹಣ ಮಂಜೂರು, ಕಾರ್ಮಿಕ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಫ್ ಬಿಡುಗಡೆ, ಕಾರ್ಮಿಕರ ಮಕ್ಕಳ ಮಧುವೆಗಳಿಗಾಗಿ ಬಿಡುಗಡೆ ಮಾಡುತ್ತಿರುವ ಸರಕಾರ 60 ಸಾವಿರ ಹಣವನ್ನು ಬಿಡುಗಡೆ ಗೊಳಿಸಿಸದೇ ವಿಳಂಬ ಮಾಡುತ್ತಿದ್ದು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ, ಅಲ್ಲದೇ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ ಸೇರಿದಂತೆ ಹಲವಾರು ಯೋಜನೆಗಳನ್ನ ಕಾರ್ಮಿಕರಿಗೆ ಶೀಘ್ರ ತಲುಪಿಸುವ ಕಾರ್ಯ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಫಕ್ಕೀರಪ್ಪ ಕುಂದೂರ, ಸುರೇಶ ಹರಿಜನ, ಅಶೋಕ ಕಾಳೆ, ಮಂಜುನಾಥ ಮಣ್ಣಣ್ಣವರ, ಮಂಜುನಾಥ ಕಂಕನವಾಡ, ಶಂಕರಗೌಡ ಪಾಟೀಲ, ಪರಶುರಾಮ ಈಳಗೇರ, ಮೌಲಾಲಿ ಶೇಖಲ್ಲಿ, ಸಾಭಿಕ್ ಅಹ್ಮದ್ ಅಂಬೂರ, ಫಾತೀಮಾ ಮುಲ್ಲಾನವರ, ವೇಂಕಟೇಶ ವಡ್ಡರ, ಫಕ್ಕೀರೇಶ ಹರಿಜನ, ಸಯ್ಯದ್‌ಗುಲಾಮ್ ರಬ್ಬಾನಿ ಹಾಫೀಜ್, ಶೇಖರ್ ಲಮಾಣಿ, ಸುರೇಶ ಮಾದರ, ಸಂಜು ಕೆಳಗೇರಿ, ನೀಲಪ್ಪ ಕೆಳಗೇರಿ ಸೇರಿದಂತೆ ಇತರ ಕಾರ್ಮಿಕ ಮುಖಂಡರು ಇದ್ದರು.