ಹೂವಿನ ಹಡಗಲಿ

ಸಾವಿತ್ರಿಬಾಯಿ ಜನ್ಮದಿನ ಮಹಿಳಾ ಶಿಕ್ಷಕರ ಜಯಂತಿಗೆ ಒತ್ತಾಯ

ಸಾವಿತ್ರಿಬಾಯಿ ಜನ್ಮದಿನ ಮಹಿಳಾ ಶಿಕ್ಷಕರ ಜಯಂತಿಗೆ ಒತ್ತಾಯ

ಹೂವಿನ ಹಡಗಲಿ 27: ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಪ್ರತಿವರ್ಷವೂ ಜ.3ರಂದು ಆಚರಿಸುವ ಸರ್ಕಾರ ಅವರ ಜಯಂತಿಯನ್ನು ಮಹಿಳಾ ಶಿಕ್ಷಕರ ಜಯಂತಿಯನ್ನಾಗಿ ಆಚರಣೆ ಮಾಡಬೇಕು ಎಂದು ಧಾರವಾಡ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಅಧ್ಯಕ್ಷೆ ಡಾ. ಲತಾ ಎಸ್‌.ಮುಳ್ಳೂರ ಒತ್ತಾಯಿಸಿದರು.  

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ 2022-23ನೇ ಸಾಲಿನ ನೂತನ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ಉದ್ಘಾಟನೆ,ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಶಾಲೆಗಳಲ್ಲಿ ಶಿಕ್ಷಕಿಯರಿಗೆ ಪ್ರತ್ಯೇಕ ಶೌಚಾಲಯ, ಪದವೀಧರ ಶಿಕ್ಷಕಿಯರಿಗೆ ಬಡ್ತಿ, ಅಂತರ ಜಿಲ್ಲಾ ವರ್ಗಾವಣೆಯನ್ನು ಸರ್ಕಾರ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದು ಶಾಸಕ ಪಿಟ..ಪರಮೇಶ್ವರನಾಯ್ಕ ಮನವಿ ಮಾಡಿದರು. 

ಕಾರ‌್ಯಕ್ರಮ ಉದ್ಘಾಟಿಸಿದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳ ಶೋಷಣೆ, ಬಾಲ್ಯವಿವಾಹ, ಮೂಢನಂಬಿಕೆಯಂತ ಸಮಾಜದ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಹೋರಾಟ ಮಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದುಡಿದು ಸಮಾಜ ಸುಧಾರಣೆ ಮಾಡಿದರು ಎಂದ ಅವರು ಬುದ್ಧ, ಬಸವ, ಅಂಬೇಡ್ಕರ ಅವರು 870ರಲ್ಲಿ ಮೇಲು, ಕೀಳು ಎಂಬ ಜಾತಿ ವ್ಯವಸ್ಥೆ ಕಿತ್ತು ಹಾಕಿದ್ದರು, ಅವರ ಆದರ್ಶಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದ ಅವರು ಪಾಲಕರು ಮಕ್ಕಳನ್ನು ಮುದ್ದು ಮಾಡದೇ ಕಲಿಕೆ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಬೇಕು ಎಂದರು. 

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷೆ ಎಲ್‌.ಎಂ.ಶ್ರೀಲತಾ ವಹಿಸಿದ್ದರು. ಪ್ರಾಧ್ಯಾಪಕ ಡಾ.ಹೆಚ್‌.ಎಂ.ಚಂದ್ರಶೇಖರ ಶಾಸ್ತ್ರಿ ಉಪನ್ಯಾಸ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ.ಕೋಟೆಪ್ಪ, ದೈಹಿಕ ಶಿಕ್ಷಣ ಪರೀವೀಕ್ಷಕ ಮುದ್ತಾಫಾ, ಸಾವಿತ್ರಿಬಾಯಿ ಸಂಘಟನೆ ರಾಜ್ಯ ಕಾರ‌್ಯದರ್ಶಿ ರೇಷ್ಮಾ ಕೆ, ಜಿಲ್ಲಾಧ್ಯಕ್ಷೆ  ಉಮಾದೇವಿ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಅರುದಂತಿ, ನಿವೃತ್ತ ಶಿಕ್ಷಕ ಕರೀವೀರನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಅಶೋಕ, ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ತಿಮ್ಮಣ್ಣ, ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ, ಬಸವನಗೌಡ ಪಾಟೀಲ, ವಸಂತ ಇದ್ದರು. 


ಸುದ್ದಿ ಓದಿ