ಪಕ್ಷದ ನಿಷ್ಠಾವಂತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ: ಆಗ್ರಹ
ಶಿಗ್ಗಾವಿ 20: ಶಿಗ್ಗಾವಿ ಸವಣೂರ ಮತಕ್ಷೇತ್ರಕ್ಕೆ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಶಾಸಕ ಸಂಸದರು ಇಲ್ಲದಿರುವುದರಿಂದ ಧಾರವಾಡ ಲೋಕಸಭಾ ಚುನಾವಣೆಗೆ ಶಿಗ್ಗಾವಿ ಸವಣೂರ ಮತಕ್ಷೇತ್ರದಿಂದ ಪಕ್ಷದ ನಿಷ್ಠಾವಂತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಪಕ್ಷದ ಹೈಕಮಾಂಡ್ಗೆ ಮಂಜುನಾಥ್ ಮನ್ನಣ್ಣನವರ ಆಗ್ರಹ ಮಾಡಿದ್ದಾರೆ.
ಕಳೆದ 20 ವರ್ಷಗಳಿಂದಲೂ ಶಿಗ್ಗಾವಿ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಶಾಸಕ ಅಥವಾ ಸಂಸದರು ಇಲ್ಲದಂತಾಗಿ ಸಾವಿರಾರು ನಿಷ್ಠಾವಂತ ಕಾರ್ಯಕರ್ತರಿಗೆ ಶಕ್ತಿ ತುಂಬುವವರೆ ಇಲ್ಲದಂತಾಗಿದೆ ಈ ಬಾರಿಯಾದರೂ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಶಿಗ್ಗಾವ್ ಮತಕ್ಷೇತ್ರದ ಪಕ್ಷದ ನಿಷ್ಠಾವಂತರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಹೈಕಮಾಂಡ್ಗೆ ಮಂಜುನಾಥ್ ಮಣ್ಣಣ್ಣವರ ಮನವಿ ಮಾಡಿಕೊಂಡಿದ್ದಾರೆ ಜೊತೆಗೆ ಬಿಜೆಪಿ ಅವರು ಪದೇ ಪದೇ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ ಎಂದರು.