ಬ್ಯಾಡ್ಗಿ

ವಿವಿಧ ಸೌಲಭ್ಯಗಳಿಗಾಗಿ ಆಗ್ರಹಿಸಿ ಮನವಿ

ವಿವಿಧ ಸೌಲಭ್ಯಗಳಿಗಾಗಿ ಆಗ್ರಹಿಸಿ ಮನವಿ

ಬ್ಯಾಡಗಿ 24: ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಎನ್. ಹುಚ್ಚೇರ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಂದಿನ ದಿನಮಾನದಲ್ಲಿ ಗಣಕೀಕೃತ ವ್ಯವಸ್ಥೆಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆಯ್.ಎಸ್. ಮಳಿಯಣ್ಣನವರ, ಕಾರ್ಯದರ್ಶಿ ಬಿ.ಎನ್. ಖವಾಸ್, ಗುಂಡಪ್ಪ ಹುಬ್ಬಳ್ಳಿ, ಶಬ್ಬೀರ್ ಬಾಗೇವಾಡಿ, ಎಂ.ಎ.ತಹಶೀಲ್ದಾರ, ಶೃತಿ ಮೈದೂರ, ಸರಸ್ವತಿ ಕುರುಬನಹಳ್ಳಿ, ಹೇಮಾ ಗಳಗನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ