ಶಿಗ್ಗಾವ್

ಸಂಗೋಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಆಗ್ರಹ

ಸಂಗೋಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಆಗ್ರಹ

ಶಿಗ್ಗಾವಿ 20: ಪಟ್ಟಣದಲ್ಲಿ ಕಿತ್ತೂರ ಚನ್ನಮ್ಮನ ಮೂರ್ತಿ ಸ್ಥಾಪನೆಯ ಸ್ಥಳದ ಎದುರಿಗೆ ಸಂಗೋಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲು ಸ್ಥಳ ಗುರುತಿಸುವಂತೆ ಒತ್ತಾಯಿಸಿ ತಾಲೂಕ ಪ್ರಾದೇಶಿಕ ಕುರುಬರ ಸಂಘದ ಪಾದಾಧಿಕಾರಿಗಳು ತಹಶೀಲ್ದಾರ ಹಾಗೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗುರುವಾರ ಮನವಿ ಅರ್ಪಿಸಿದರು.

ಮನವಿ ಅರ್ಪಿಸಿ ಮಾತನಾಡಿದ ತಾಲೂಕ ಪ್ರಾದೇಶಿಕ ಕುರುಬರ ಸಂಘದ ಅದ್ಯಕ್ಷ ಫಕ್ಕೀರಪ್ಪ ಕುಂದೂರ, ಕಿತ್ತೂರಾಣಿ ಚನ್ನಮ್ಮ ಬಲಗೈ ಭಂಟನಾಗಿ ದೇಶ, ಭಾಷೆ ಮತ್ತು ಜನತೆಯನ್ನು ಪರಕೀಯರ ಕೈಯಿಂದ ಬಿಡುಗಡೆಗೊಳಿಸುವುದಕ್ಕಾಗಿ ಚನ್ನಮ್ಮನನ್ನ ತಾಯಿ ಸ್ವರೂಪದಿಂದ ಕಂಡು ಅವರ ರಕ್ಷಣೆ ಹಾಗೂ ತಾಯ್ನಾಡಿಗೆ ರಕ್ಷಣೆ ನೀಡಿದ ಮಾಹಾನ್ ಯೋಧ ರಾಯಣ್ಣನ ಮೂರ್ತಿ ಅನಾವರಣವನ್ನ ಚನ್ನಮ್ಮ ಮೂರ್ತಿಯ ಎದುರಿಗೆ ಸ್ಥಾಪಿಸುವುದು ಯೋಗ್ಯವಾದ ಸ್ಥಳವಾಗಿದೆ ಜೊತೆಗೆ ಹೆಮ್ಮೆಯ ವಿಷಯವೂ ಆಗುತ್ತದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ನಮಗೂ ಸಹಿತ ಸಂಗೋಳಿ ರಾಯಣ್ಣನ ಮಾತೃ ಸ್ವರೂಪಳಾದ ತಾಯಿ ರಾಣಿ ಚನ್ನಮ್ಮನ ಭಂಟನಾಗಿದ್ದ ಸಂಗೋಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಸರ್ವಸದಸ್ಯರೂ ನಮ್ಮ ಸಹಕಾರವನ್ನು ಸಂಪೂರ್ಣವಾಗಿ ನೀಡಲು ಸಿದ್ದರಿದ್ದು ಸೂಕ್ತ ಸ್ಥಳ ನಿಗದಿ ಮಾಡಿ ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಸಕಲ ಪ್ರಯತ್ನ ಮಾಡಲಾಗುವುದು ಎಂದು ಬರವಸೆ ನೀಡಿದರು.

ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯರಾದ ಸಿದ್ದಾರ್ಥಗೌಡ ಪಾಟೀಲ, ವಸಂತ ಬಾಗೂರ, ಸಂಗೀತಾ ವಾಲ್ಮೀಕಿ, ವಿವಿಧ ಸಮಾಜದ ಹಿರಿಯರಾದ ಗದಿಗೆಪ್ಪ ಕೊಡ್ಲಿವಾಡ, ಸಂಗಪ್ಪ ಕಂಕನವಾಡ, ಈರಪ್ಪ ನವಲಗುಂದ, ಶಂಕರಗೌಡ ಪಾಟೀಲ, ಅಶೋಕ ಕಾಳೆ, ಮಾಲತೇಶ ಯಲುವಿಗಿ, ಪುಟ್ಟಪ್ಪ ಮತ್ತೂರ, ಶ್ರೀಕಾಂತ ಮತ್ತೂರ, ಸಂತೋಷ ಚಾಕಲಬ್ಬಿ, ಫಕ್ಕೀರಪ್ಪ ನವಲೂರ, ಶಿವಪ್ಪ ಬಂಕಾಪೂರ, ಪಿ ಡಿ ಕಲಾಲ, ಕೆಂಚಪ್ಪ, ಎಚ್ ಎನ್ ಜವಳಗಟ್ಟಿ, ಎಸ್ ಎನ್ ಕಬನೂರ, ನಿಂಗಪ್ಪ ಮಾವೂರ, ಎಸ್ ಎಚ್ ಹಾದಿಮನಿ, ಪಿ ಬಿ ಪಾಟೀಲ, ಎಂ ಐ ಶೇಕಲ್ಲಿ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ