ಅಂಗನವಾಡಿ ಕಾರ್ಯಕರ್ತರಿಗೆ ಸೇವಾ ಭದ್ರತೆ ನೀಡಲು ಆಗ್ರಹಿಸಿ ಧರಣಿ
ರಾಣಿಬೆನ್ನೂರ 04: ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಸೇವೆ ಸಲ್ಲಿಸಲು ಭದ್ರತೆ ನೀಡಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ, ಕಾರ್ಯಕರ್ತರು ಮತ್ತು ಸಹಾಯಕಿಯರು ಬುಧವಾರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಗರತ್ನಾ ಎಲಿಗಾರ ಮಾತನಾಡಿ, ತಾಲೂಕಿನ ವಿವಿಧ ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಇಲ್ಲಸಲ್ಲದ ಅಪಾವಾದ ನೀಡುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಸೇವೆ ಸಲ್ಲಿಸಲು ಭದ್ರತೆ ನೀಡಿ ಸಂರಕ್ಷಣೆ ಮಾಡಬೇಕು ಎಂದು ಒತ್ತಯಿಸಿದರು.
ಧರಣಿಯಲ್ಲಿ ನಾಗಮ್ಮ ಮುದುಕಣ್ಣನವರ, ಹಾಲಮ್ಮ ಕಟ್ಟಿಮನಿ, ಸಲ್ಮಾ ಅತ್ತರ, ಪರಸಮ್ಮ ಉಪ್ಪೀನ, ಮಹಾಲಕ್ಷ್ಮಿ, ವಿದ್ಯಾ ಮಾದರ, ರೇಖಾ ಮಲ್ಲೂರ, ಸುಶೀಲಮ್ಮ ಮುಷ್ಟೂರ, ನೇತ್ರಾ ಮುಷ್ಟೂರ ಸೇರಿದಂತೆ ಮತ್ತಿತರ ಕಾರ್ಯಕರ್ತರು ಮತ್ತು ಸಹಾಯಕಿಯರು ಇದ್ದರು.