ರಾಣೆಬೆನ್ನೂರ

ಕಸ ಸಂಗ್ರಹಣಾ ಘಟಕ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ

ಕಸ ಸಂಗ್ರಹಣಾ ಘಟಕ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ

ರಾಣೀಬೆನ್ನೂರು 12: ನಗರದಿಂದ ಹುಲ್ಲತ್ತಿ ಮಾರ್ಗವಾಗಿ ನಗರಸಭೆ ಸಂಗ್ರಹಿಸಿದ ತ್ಯಾಜ್ಯ ವಸ್ತುಗಳು ಹುಲ್ಲತ್ತಿ ಮೂಲಕ ಸಂಚರಿಸುತ್ತಿರುವುದರಿಂದ ಈ ಗ್ರಾಮದ ನಾಗರಿಕರು ಮಾಲಿನ್ಯದಿಂದ ಬಳಲುವಂತಾಗಿದೆ. ನಗರಸಭೆ ಕೂಡಲೇ ಕಸ ವಿಲೇವಾರಿ ಘಟಕ ಸ್ಥಳಾಂತರಿಸಬೇಕು. ಕಸ ವಿಲೇವಾರಿ ವಾಹನ ಸಂಚಾರ ನಿಷೇಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. 

ಗ್ರಾಮದ ಯುವ ಮುಖಂಡ ಜಗದೀಶ ಕೆರೂಡಿ ಮಾತನಾಡಿ, ಗ್ರಾಮದಿಂದ ತ್ಯಾಜ್ಯ ವಸ್ತುಗಳು ಹೊತ್ತು ಸಾಗುವ ಮಾರ್ಗದಲ್ಲಿಯೇ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರವಿದೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ನಗರಸಭೆ ತ್ಯಾಜ್ಯ ಸಂಗ್ರಹಣಾ ಘಟಕವು ಬೇರೆಡೆ ಸ್ಥಳಾಂತರಿಸಬೇಕು ಮತ್ತು ತ್ಯಾಜ್ಯ ಹೊತ್ತ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿದರು. 

ರಾಘು ಓಲೇಕಾರ, ಮಾರುತಿ ದೊಡ್ಡಮನಿ, ರವಿ ಕೆರೂಡಿ, ಅರುಣ ಕುಡಚೆಕರ, ಗೋವಿಂದ ಲಮಾಣಿ, ನಾಗರಾಜ ಲಮಾಣಿ, ಹನುಮಂತ ಲಮಾಣಿ, ಶಿವು ಲಮಾಣಿ, ಕರಬಸಪ್ಪ ವಡ್ಡರ, ಮಹಾಂತೇಶ ವಡ್ಡರ, ಶಿವರಾಜ ಲಮಾಣಿ ಸೇರಿಂದತೆ ಹುಲ್ಲತ್ತಿ ಗ್ರಾಮದ ಗ್ರಾಮಸ್ಥರು ತಾಂಡೆಯ ಬಂಜಾರ ಸಮುದಾಯದ ನಾಗರಿಕರು ಪಾಲ್ಗೊಂಡಿದ್ದರು.  

ಸುದ್ದಿ ಓದಿ