ಚಾಕ್ರಿ ಮಾಡುವವರಿಗೆ ಜೀತ ಕಾನೂನಿನಡಿ ಗುರುತಿಸಿ ಪುನರ್ವಸತಿ ಕಲ್ಪಿಸುವಂತೆ ಆಗ್ರಹ
ಶಿಗ್ಗಾವಿ 09: ಉತ್ತರ ಕರ್ನಾಟಕ ಭಾಗದಲ್ಲಿ ಬಿಟ್ಟಿ ಚಾಕರಿ ಒಂದು ಅನಿಷ್ಠ ಪದ್ದತಿ ಜೀವಂತ ಇರುವುದನ್ನು ಸಮೀಕ್ಷೆ ಮೂಲಕ ಖಾತರಿ ಪಡಿಸಿದೆ ಎಂದು ಜೀವಿಕ ರಾಜ್ಯ ಸಂಚಾಲಕ ಡಾ.ಕಿರಣ ಪ್ರಸಾದ ಹೇಳಿದರು.
ಶಿರಶಿಯ ಅಂಬೇಡ್ಕರ ಭವನದಲ್ಲಿ ನಡೆದ ಬಿಟ್ಟಿ ಚಾಕ್ರಿ ಮಾಡುವವರಿಗೆ ಜೀತ ಕಾನೂನಿನಡಿ ಗುರುತಿಸಿ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮನವಿ ನೀಡುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು 2020 ರಲ್ಲಿ ಸರಕಾರದ ಅಧಿಸೂಚನೆಯಲ್ಲಿ ಬಿಟ್ಟಿ ಜಾಕರಿ ಆಚರಣೆಯನ್ನು ಸಂಪೂರ್ಣವಾಗಿ ನಿಷೇದಿಸಿ ಜೀತ ವ್ಯಾಪ್ತಿಯೊಳಗೆ ಸೇರಿಸಿದೆ, ಬಿಟ್ಟಿ ಜಾಕರಿ ಆಚರಣೆ ಗ್ರಾಮೀಣ ಭಾಗದಲ್ಲಿ ಜಾರಿಯಲ್ಲಿದೆ ಅಲ್ಲದೇ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ 1993 ರ ಅನುಚ್ಚೇದ 58 ಎ ರಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ತಹಶೀಲ್ದಾರ ಮತ್ತು ಉಪವಿಭಾಗಾಧಿಕಾರಿಗಳ ಮುಖೇನ ಅರ್ಜಿ ಸಲ್ಲಿಸಿದ ಬಿಟ್ಟಿ ಜಾಕರಿಗಳ ತನಿಖೆ ನೆಡೆಸಿ ಬಿಡುಗಡೆ ಪತ್ರ ನೀಡಬೇಕು, ಬಿಡುಗಡೆಗೊಂಡ ಬಿಟ್ಟಿ ಜಾಕರಿಗಳಿಗೆ ತಾತ್ಕಾಲಿಕ ಪರಿಹಾರ ಮತ್ತು ಪುನರವಸತಿ ಕಲ್ಪಿಸಬೇಕು, ಎಲ್ಲಾ ತಾಲೂಕಗಳಲ್ಲಿ ಕಾರ್ಯಪಡೆ ತಂಡಗಳಿಂದ ಜೀತ ಕಾನೂನಿನಡಿ ತನಿಖೆ ನೆಡೆಸಬೇಕು, ಜೀತದಾಳುಗಳಿಗೆ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಬಿಟ್ಟಿ ಜಾಕರಿಯಿಂದ ಬಿಡುಗಡೆಗೊಂಡ ಪಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ದಲಿತ ಮುಖಂಡ ಡಿ.ಎಸ್.ಮಾಳಗಿ, ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಮಹಾದೇವಪ್ಪ, ಅಶೋಕ ಕಾಳೆ, ರಾಜು ಕೆಂಬಾವಿ,
ಕಾಳಪ್ಪ, ನೀಲಪ್ಪ ಕೆಳಗೇರಿ, ವಿಜಯ ಮಾದರ, ಲಷ್ಮೀಕಾಂತ ಮಾದರ, ಮಹ್ಮದ ಗೌಸ, ಸಾಭಿಕಹ್ಮದ ಅಂಬೂರ, ಮೌಲಾಲಿ ಶೌಕಲ್ಲಿ, ಮಂಜುನಾಥ ಮಾದರ, ಪರಮೇಶ ಹರಿಜನ, ನಿಂಗಪ್ಪ, ರಾಮಪ್ಪ, ಮರಿಯಪ್ಪ, ಬಸವರಾಜ ಸೇರಿದಂತೆ ದಲಿತ ಮುಖಂಡರು ಹಾಗೂ ಜೀವಿಕ ಪದಾಧಿಕಾರಿಗಳು ಉಪಸ್ಥಿತರಿದ್ದರು.