ಬ್ಯಾಡ್ಗಿ

ಕಳಪೆ ಕಾಮಗಾರಿ ಕ್ರಮಕ್ಕೆ ಅಗ್ರಹ

ಕಳಪೆ ಕಾಮಗಾರಿ ಕ್ರಮಕ್ಕೆ ಅಗ್ರಹ

ಕಳಪೆ ಕಾಮಗಾರಿ ಕ್ರಮಕ್ಕೆ ಅಗ್ರಹ

ಬ್ಯಾಡಗಿ 20:  ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ರೈಲ್ವೆ ನಿಲ್ದಾಣ ಕಳಪೆ ಕಾಮಗಾರಿ ಯಾಗಿದ್ದು ಖುದ್ದಾಗಿ ಸ್ಥಳವನ್ನು ಪರೀಶೀಲಿಸಿ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೊಟೇ ಬೆನ್ನೂರು ರೈಲು ಸುಧಾರಣಾ ಸಮಿತಿಯ ಸದಸ್ಯರು ಮಾಜಿ ಸಿಎಂ ಸಂಸದ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿಯನ್ನು ಸಲ್ಲಿಸಿದರು.ತಾಲೂಕು ರೈತ ಸಂಘದ ವತಿಯಿಂದ ಶೀಡೆನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೆರೆಗೆ ಬಾಗಿನ ಅರ​‍್ಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದರು ಅಧ್ಯಕ್ಷ ಬಸವರಾಜ್ ಬಳ್ಳಾರಿ ಮಾತನಾಡಿ ಬ್ಯಾಡಗಿಯಲ್ಲಿ ಪ್ರತಿದಿನ ಸಾವಿರಾರು ಜನರು ರೈತರು ರೈಲು ನಿಲ್ದಾಣ ಮೂಲಕ ಪ್ರಯಾಣ ಮಾಡುತ್ತಾರೆ ಸುಮಾರು 48 ಕೋಟಿ ವೆಚ್ಚದಲ್ಲಿ ಹೊಸ ರೈಲ್ವೆ ನಿಲ್ದಾಣ ನಿರ್ಮಿಸಲಾಗಿದೆ ಆದರೆ ಕಾಮಗಾರಿಯೂ ಸಂಪೂರ್ಣ  ಕಳಪೆಯಿಂದ ಕೂಡಿದ್ದು ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತದೆ ಹಾಗೂ ವಿಶ್ರಾಂತಿ.ಪಾರ್ಕಿಂಗ. ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಈ ಕೂಡಲೇ ಮಾಹಿತಿ ಪಡೆದು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.  

ರೈಲ್ವೆ ಹಳಿಯ ಮೇಲೆ ಕಟ್ಟಿರುವ ಬ್ಯಾಡಗಿ ಮೂಟೇ ಬೆನ್ನೂರು ಸಂಪರ್ಕಿಸುವ ಮೇಲು ಸೇತುವೆಯು ಕೂಡ ಕಳಪೆ ಸೇತುವೆ ಕಾಮಗಾರಿ ಆಗಿದ್ದು ಕಳಪೆಯಿಂದ ಕೂಡಿದೆ ಸೇತುವೆ ಮೇಲೆ ಅವೈಜ್ಞಾನಿಕ ತಗ್ಗುಗಳು ಮಾಡಿದ್ದು ಇದರಿಂದ ವಾಹನ ಸವಾರರಿಗೆ ಅಪಘಾತಕ್ಕೆ ಅಹ್ವಾನ ನೀಡುತ್ತಿವೆ ಮತ್ತು ಸೇತುವೆ ಮೇಲಿನ ವಿದ್ಯುತ್ಗಳು ಸಹ ಬಂದ್ ಆಗಿದೆ ಮತ್ತು ನಿಲ್ದಾಣದಲ್ಲಿ ವೇಗದೂತ ರೈಲುಗಳನ್ನು ನಿಲ್ಲಿಸಿದ್ದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು ಈ ಸಂದರ್ಭದಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ.ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸಮಿತಿಯ ಗೌರವಾಧ್ಯಕ್ಷ ಸುರೇಶ ಯತ್ನಳ್ಳಿ. ಮಲ್ಲಿಕಾರ್ಜುನ್ ಬಳ್ಳಾರಿ ಹಲವಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ