ನೊಂದ ರೈತ ಕುಟುಂಬಳಿಗೆ ಪರಿಹಾರ ವಿತರಣೆಗೆ ಆಗ್ರಹ
ಶಿಗ್ಗಾವಿ 22: ಆತ್ಮಹತ್ಯೆ ಮಾಡಿಕೊಂಡ ಬಹುತೇಕ ನೊಂದ ರೈತ ಕುಟುಂಬಳಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ಇದ್ದು ಜಿಲ್ಲೆಯ ಇನ್ನೂ 13 ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕಿದೆ ಅದನ್ನು ಸಹಿತ ಕೂಡಲೇ ವಿತರಿಸುವಂತೆ ರೈತ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ಶಿದ್ಧಲಿಂಗೇಶ(ವರುಣಗೌಡ) ಪಾಟೀಲ ಆಗ್ರಹಿಸಿದರು.
ಪಟ್ಟಣದ ಪತ್ರಕರ್ತರ ಕಾರ್ಯಾಲಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರೈತರ ಆತ್ಮಹತ್ಯೆಗೆ ಮೂಲ ಕಾರಣ ಕೃಷಿಗಾಗಿ ರೈತರು ಖಾಸಗಿ ಹಾಗೂ ಸಹಕಾರಿ ಬ್ಯಾಂಕಗಳಲ್ಲಿ ಮಾಡಿದ ಸಾಲ, ಆ ಸಾಲವನ್ನು ತಿರಿಸುವದು ಹೇಗೆ ಎಂಬ ಭಯದಲ್ಲಿ ರೈತರು ಆತ್ಮಹತ್ಯಗೆ ಶರಣಾಗುತ್ತಿದ್ದಾರೆ, ಕೂಡಲೇ ಸರ್ಕಾರದವರು ಸಹ ಎಚ್ಚೆತ್ತು ರೈತರ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಜೊತೆಗೆ ಆ ಕುಟುಂಬದ ಯಜಮಾನನೆ ಇಲ್ಲದ ಮೇಲೆ ಆ ರೈತ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರವನ್ನು ವಿಳಂಬ ಮಾಡದೆ ಶೀಘ್ರಗತಿಯಲ್ಲಿ ಪರಿಹಾರ ಮುಟ್ಟಿಸುವ ಕಾರ್ಯವಾಗಬೇಕು ಅಂದಾಗ ಮಾತ್ರ ಆ ಕುಟುಂಬಗಳು ಸಾಲದಿಂದ ಹೊರಬರಲು ಸಾಧ್ಯವಿದೆ ಎಂದು ಒತ್ತಾಯಿಸಿದರು.
2020-21 ನೇ ಸಾಲಿನಲ್ಲಿ 44 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ಆಯ್ಕೆ ಸಮೀತಿಯು ಇಗಾಗಲೇ 15 ಕುಟುಂಬಗಳಿಗೆ ಪರಿಹಾರ ನೀಡಿದ್ದು ಇನ್ನೂ ಸುಮಾರು 13 ಕುಟುಂಬಗಳಿಗೆ ಪರಿಹಾರ ನೀಡಬೇಕಿದೆ ಅಲ್ಲದೆ 2021-22 ನೇ ಸಾಲಿನಲ್ಲಿ ಒಟ್ಟು 4 ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಅವರಿಗೂ ಇನ್ನೂ ಪರಿಹಾರ ಸಿಗಬೇಕಿದೆ ಹಾಗಾಗಿ ಈ ಎಲ್ಲ ರೈತ ಕುಟುಂಬಗಳಿಗೆ ಸರ್ಕಾರ ಶೀಘ್ರ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.