ಪತ್ರಿಕಾ ವಿತರಕರಿಗೆ ನೀಡಲು ಆಗ್ರಹ
ಶಿಗ್ಗಾವಿ ಸಪ್ಟೆಂಬರ್ 11 : ಆರ್ಥಿಕ ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರಿಗೆ ಸಕರ್ಾರದಿಂದ ಸಹಾಯ ನೀಡಬೇಕು ಎಂದು ತಾಲೂಕಿನ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ ನೇತೃತ್ವದಲ್ಲಿ ತಹಶೀಲ್ದಾರ ಪ್ರಕಾಶ ಕುದರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪತ್ರಿಕಾ ವಿತರಕರದು ಇಂದಿಗೂ ಅಸಂಘಟಿತ ಉದ್ಯೋಗವಾಗಿದ್ದು. ಸಾಮಾಜಿಕ ಆಥರ್ಿಕ ಭದ್ರತೆ ಇಲ್ಲ, ಪಿಂಚಣಿ, ವಿಮೇ, ಅನಾರೋಗ್ಯಗಳ ಚಿಕಿತ್ಸೆಗೆ ನೆರವು ಹೀಗೆ ಯಾವುದೇ ಸೌಕರ್ಯಗಳು ಇರುವದಿಲ್ಲ. ಪತ್ರಿಕಾ ರಂಗದ ಅವಿಬಾಜ್ಯ ಅಂಗವಾಗಿರುವ ಇವರು ದಿನಪತ್ರಿಕೆಗಳು ನೀಡುವ ಕಮೀಶನ್ ಒಂದನ್ನೇ ಅವಲಂಬಿಸಿದ್ದಾರೆ. ಇವರನ್ನು ಸಂಘಟಿತ ವಲಯಕ್ಕೆ ತಂದು ಅಗತ್ಯ ಭದ್ರತೆ ಹಾಗೂ ಸೌಕರ್ಯಗಳನ್ನು ನೀಡಲು ಸಕರ್ಾರ ಮುಂದಾಗಬೇಕಿದೆ. ಈಗಾಗಲೆ ಕೋವಿಡ್ ಕಾಯಿಲೆಯಿಂದ ಸಕರ್ಾರದ ಲಾಕ್ಡೌನ್ ಸಂದರ್ಭದಲ್ಲಿ ತುಂಭಾ ಆಥರ್ಿಕ ಸಂಕಷ್ಟ ಅನುಭವಿಸುತ್ತಿದ್ದು. ಸಕರ್ಾರ ನಮ್ಮತ್ತ ಗಮನ ಹರಿಸಬೇಕು.
ಬೇಡಿಕೆಗಳು : ಕಾರ್ಮಿಕರಿಗೆ ಇತರ ವಲಯಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು ಅದೇ ರೀತಿ ಪತ್ರಿಕಾ ವಿತರಕರಿಗೂ ಪ್ರೋತ್ಸಾಹ ಧನ, ಪತ್ರಿಕಾ ವಿತರಿಗೆ ಸಕರ್ಾರದಿಂದ ವಸತಿ ನಿವೇಶನ, ವಿತರಕರಿಗೆ ಆರೋಗ್ಯ ವಿಮೆ, ಮಳೆಗಾಲಕ್ಕೊಂದು ಸೇಡ್, ಗುರುತಿನ ಚೀಟಿ, ಅಪಘಾತವಾದಾಗ ರೂ;1 ಲಕ್ಷ್ ಪರಿಹಾರ, ಇ.ಎಸ್.ಆಯ್, ಮತ್ತು ಪಿ.ಎಫ್ ನಂತರ ಸೌಲಭ್ಯ, ಜೀವನ ಭದ್ರತೆ, ಈಗಾಗಲೆ 2018-19 ಸಾಲಿನ ಬಜೆಟ್ನಲ್ಲಿ ಸಕರ್ಾರದ ಹಿಂದಿನ ಮುಖ್ಯ ಮಂತ್ರಿಗಳು ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿಗಾಗಿ 2 ಕೋಟಿ ಘೋಷಣೆ ಮಾಡಿದ್ದರು, ಯೋಜನೆ ಮಾರ್ಗಸೂಚಿ ಯೋಜನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೀಡಿತ್ತು, ಪತ್ರಿಕಾ ವಿತರಕರ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಪಡೆಯುವ ಬಗ್ಗೆ ಮಾಧ್ಯಮ ಅಕಾಡೆಮಿ ನಿರ್ಧಾರ ಮಾಡಿತ್ತು, ಸಂಖ್ಯೆ ಎಷ್ಟುಂಬುವುದು ನಿಖರವಾದರೆ ಯೋಜನೆ ರೂಪಿಸುವುದು ಅಕಾಡೆಮಿಯ ಉದ್ದೇಶವಾಗಿತ್ತು, ಅದನ್ನು ಸಹ ಅಕಾಡೆಮಿ ನಿರ್ಲಕ್ಷಿಸಿದೆ. ಆದ ಕಾರಣ ಬರುವ ದಿನಗಳಲ್ಲಿ ಪತ್ರಿಕಾ ವಿತರಕರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ವಿತರಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿದ್ರಾಮಗೌಡ ಮೆಳ್ಳಾಗಟ್ಟಿ, ಕಾರ್ಯದಶರ್ಿ ಸುರೇಶ ಯಲಿಗಾರ, ಹಿರಿಯ ವರದಿಗಾರರಾದ ಬಿ.ಎಸ್.ಹಿರೇಮಠ, ಪರುಶರಾಮ ಸತ್ಯಪ್ಪನವರ, ಎಂ.ವ್ಹಿ.ಗಾಡದ, ಬಸವರಾಜ ಹೊನ್ನಣ್ಣವರ, ಸದಾಶಿವ ಹಿರೇಮಠ, ರವಿ ಉಡುಪಿ, ಬಸವರಾಜ ವ್ಹಿ. ಹೆಚ್, ಮಂಜುನಾಥ ಕಮ್ಮಾರ, ಪರಮೇಶ ಲಮಾಣಿ, ಗೌಡಪ್ಪ ಬನ್ನೆ ಸೇರಿದಂತೆ ವಿತರಕರು ಉಪಸ್ಥಿತರಿದ್ದರು.
ಪಟ್ಟಣದಲ್ಲಿ ಪತ್ರಿಕೆಗೆ ಒಂದು ಕಾಯರ್ಾಲಯದ ಅವಶ್ಯಕತೆಯಿದೆ ಆದರೆ ತಾಲೂಕಿನ ಚುನಾಯಿತ ಪ್ರತಿನಿಧಿಗಳು ಹಾಗೂ ಸಮಾಜ ಸುಧಾರಕರು, ಸಂಘಟನೆಗಳ ಪದಾಧಿಕಾರಿಗಳು, ಯಾರಾದರೂ ಸರಿ ಪತ್ರಿಕಾ ವಿತರಕರ ಕಾಯರ್ಾಲಯಕ್ಕೆ 2 ಗುಂಟೆ ಜಾಗ ನೀಡಿದರೆ ಒಳ್ಳೆಯದಾಗುತ್ತದೆ.