ಶಿಗ್ಗಾವ್

ಅಂಬೇಡ್ಕರ್ ಪುತ್ಥಳಿಯ ಕಟ್ಟಡದ ಸುರಕ್ಷತಾ ತಡೆಗೋಡೆಗಳನ್ನು ಹಾಳುಮಾಡಿದವರನ್ನು ಬಂಧಿಸಲು ಆಗ್ರಹ

ಅಂಬೇಡ್ಕರ್ ಪುತ್ಥಳಿಯ ಕಟ್ಟಡದ ಸುರಕ್ಷತಾ ತಡೆಗೋಡೆಗಳನ್ನು ಹಾಳುಮಾಡಿದವರನ್ನು ಬಂಧಿಸಲು ಆಗ್ರಹ

ಶಿಗ್ಗಾವಿ 07: ವಿನೂತನವಾಗಿ ಕಾರ್ಯಾರಾಂಭ ಮಾಡಿರುವ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಕಛೇರಿಗಳ ಸಂಕೀರ್ಣ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಪುತ್ಥಳಿಯ ಕಟ್ಟಡದ ಸುರಕ್ಷತಾ ತಡೆಗೋಡೆಗಳನ್ನು ಹಾಳುಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಹನುಮಂತ ಬಂಡಿವಡ್ಡರ ಆಗ್ರಹಿಸಿದ್ದಾರೆ. 

ಪಟ್ಟಣದ ಆಡಳಿತ ಭವನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸುಮಾರು 14 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡವು ನಿರ್ವಹಣೆ ಇಲ್ಲದೆ, ಕಸದಿಂದ ತುಂಬಿದೆ, ಕಚೇರಿಯಲ್ಲಿರುವ ವಿವಿಧ ಇಲಾಖೆಯ ಅಧಿಕಾರಿಗಳು ಆವರಣದ ಸ್ವಚ್ಚತೆ ಕುರಿತು ಗಮನ ಹರಿಸುತ್ತಿಲ್ಲಾ, ಸುರಕ್ಷತೆಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಿಲ್ಲಾ, ಖಾಸಗಿ ವ್ಯಕ್ತಿಗಳ ವಾಹನ ಪಾರ್ಕಿಂಗ್ ಆಗಿ ಕಟ್ಟಡದ ಆವರಣಗಳನ್ನು ಬಳಸಲಾಗುತ್ತಿದೆ, ತಾಲೂಕು ದಂಡಾಧಿಕಾರಿಗಳು ಶೀಘ್ರದಲ್ಲಿ ಸಮಿತಿಯನ್ನು ರಚಿಸಿ, ಸಿಬ್ಬಂದಿಗಳನ್ನು ನೇಮಿಸಿ ಭವನದ ನಿರ್ವಹಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಸುರೇಶ ತಳವಾರ, ಬಸವರಾಜ ಹರಿಜನ, ಮಂಜುನಾಥ ಹುರಳಿಕೊಪ್ಪಿ, ರಮೇಶ ಚೌವ್ವಾಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ