ಸಿಂಧಗಿ

ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ಸಿಂದಗಿ 12 : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಸಂಗೀತಾ ನಿಂಗಪ್ಪ ಆಲಾಳ (17) ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಕೂಡಲೇ ಪೋಕ್ಸೋ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಸಿಂದಗಿ ತಾಲೂಕಾ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರ  ಮುಖಾಂತರ ರಾಜ್ಯಪಾಲ ವಜುಬಾಯಿವಾಲ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. 

ಹಾಡುಹಗಲೇ ಯುವಕರು  ಸಂಗೀತಾ ನಿಂಗಪ್ಪ ಆಲಾಳ ಎಂಬ ಯುವತಿಯನ್ನು ಅಪಹರಿಸಿ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿರುವ ಲಾಡ್ಜವೊಂದರಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಪರಾರಿಯಾದ ಆರೋಪಿಗಳನ್ನು ಪೋಲಿಸರು ಕೂಡಲೇ ಪತ್ತೆ ಹಚ್ಚಿ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಯುವತಿಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಇಂಥಹ ಘಟನೆಗಳ ಮರುಕಳಿಸದಂತೆ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಡಿವಾಳಪ್ಪ ಎಂ. ಮುಂಡೇವಾಡಗಿ, ಉಪಾಧ್ಯಕ್ಷರಾದ ಪ್ರಕಾಶ ಗುಣಾರಿ, ಚನ್ನಪ್ಪ ಗೋಣಿ, ಉಮೇಶ ಜೋಗೂರ, ಭೀಮಾಶಂಕರ ಶ್ರೀಗರಿ, ಮುತ್ತು ಪಟ್ಟಣಶೆಟ್ಟಿ, ಪ್ರಕಾಶ ದಸ್ಮಾ, ಅನೀಲ ಪಟ್ಟಣಶೆಟ್ಟಿ, ನವೀನ ಶೆಳ್ಳಗಿ, ರಾಜೀವ ಭೈರಿ, ಮಹಾಂತೇಶ ನೂಲಾನವರ್, ಮಲ್ಲಿಕಾಜರ್ುನ ಲಾಳಸಂಗಿ, ಸಿದ್ಧಲಿಂಗ ಕಿಣಗಿ, ಸಂತೋಷ ಮನಗೂಳಿ, ಬಸವರಾಜ ಗುರಶೆಟ್ಟಿ, ಕುಮಾರ ಪಟ್ಟಣಶೆಟ್ಟಿ, ಸಿದ್ದು ಅಕಸ್ತಿ, ಗಂಗಾಧರ ಪಟ್ಟಣಶೆಟ್ಟಿ, ಪ್ರಸನ್ ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಮುತ್ತು ಕುಮಟಗಿ, ಅನೀಲ ಗೋಣಿ, ರಾಹುಲ ಪಟ್ಟಣಶೆಟ್ಟಿ, ಸೇರಿದಂತೆ ಇನ್ನಿತರರು ಇದ್ದರು. 



ಸುದ್ದಿ ಓದಿ