ಬೈಲಹೊಂಗಲ

ವೀರರಾಣಿ ಚನ್ನಮ್ಮ, ರಾಯಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಾಡದ್ರೋಹಿ ವಿರುದ್ಧ ಕ್ರಮಕ್ಕೆ ಆಗ್ರಹ

ವೀರರಾಣಿ ಚನ್ನಮ್ಮ, ರಾಯಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಾಡದ್ರೋಹಿ ವಿರುದ್ಧ ಕ್ರಮಕ್ಕೆ ಆಗ್ರಹ

ಬೈಲಹೊಂಗಲ 22:  ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಇವರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವರನ್ನು ಅವಹೇಳನ ಮಾಡಿದ  ನಾಡದ್ರೋಹಿ ಬೆಳಗಾವಿ ನಿವಾಸಿ ಗೌರಂಗ ಗೆಂಜೆ ವ್ಯಕ್ತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿದ ಈ ವೀರ ಮಹನೀಯರನ್ನು ನಾಡ ದ್ರೋಹಿಗಳು ಮರೆತಿದ್ದಾರೆ. ಗಡಿ ಭಾಗದಲ್ಲಿ ಇಂತಹ ಕೋಮು ಗಲಭೆ ವಾತಾವರಣ ಸೃಷ್ಟಿಸುವಂತಹ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಕನ್ನಡ ಸೇನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ. 

ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷ ಅರ್ಭಾಜ ಮುಲ್ಲಾ, ಸಲೀಂ ಜಾಮಿನದಾರ, ಶಕೀಬ ಬಹದ್ದೂರ ಶಾಯಿ, ಈರಣ್ಣ ಇಂಚಲ, ಸೊಹೈಲ ಪಾಟೀಲ, ಜುನೇದ ಕಡಬಿ, ಸಲ್ಮಾನ ಮನಿಯಾರ, ಉಮ್ಮರ ಹುಬ್ಬಳ್ಳಿ,  ಪ್ರದೀಪ ತಟ್ಟಿಮನಿ, ಪ್ರಜ್ವಲ ಹೂಗಾರ ಅನೇಲ ಕಾರ್ಯಕರ್ತರು ಇದ್ದರು.  


ಸುದ್ದಿ ಓದಿ