ಕಾರವಾರ

ಪದವಿ ಕಾಲೇಜಗಳಲ್ಲಿಯ ಅತಿಥಿ ಉಪನ್ಯಾಸಕರುಗಳನ್ನು ಖಾಯಂ ಗೊಳಿಸಲು ಒತ್ತಾಯ

ಪದವಿ ಕಾಲೇಜಗಳಲ್ಲಿಯ ಅತಿಥಿ ಉಪನ್ಯಾಸಕರುಗಳನ್ನು ಖಾಯಂ ಗೊಳಿಸಲು ಒತ್ತಾಯ

ಕಾರವಾರ 04: ಪದವಿ ಕಾಲೇಜಗಳಲ್ಲಿಯ ಅತಿಥಿ ಉಪನ್ಯಾಸಕರುಗಳನ್ನು ಖಾಯಂ ಗೊಳಿಸಲು ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ.  ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,447 ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು ಪಿ.ಎಚ್‌.ಡಿ, ಸೆಟ್ ಹಾಗೂ ನೆಟ್ ಪರೀಕ್ಷೆಗಳನ್ನು ಪಾಸಾಗಿದ್ದು ಯು.ಜಿ.ಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿದವರಾಗಿರುವುದರಿಂದ ಇವರುಗಳನ್ನು ಖಾಯಂ ಗೊಳಿಸಲು ಸೂಕ್ತ ನಿಯಮಾವಳಿಗಳನ್ನು ರೂಪಿಸಲು ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣರನ್ನು  ಒತ್ತಾಯಿಸಿದ್ದಾರೆ. 

ಕರ್ನಾಟಕ ಸರ್ಕಾರ ಈ ಹಿಂದೆ ಸ್ಥಳೀಯ ಅಭ್ಯರ್ಥಿ, ಸ್ಟಾಪ್‌ಗ್ಯಾಪ್, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರುಗಳನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಮತ್ತು ಮಾನವೀಯತೆ ಆಧಾರದ ಮೇಲೆ 1982, 1992, 1996 ಮತ್ತು 2003 ರಲ್ಲಿ ಖಾಯಂ ಗೊಳಿಸಿದ ಉದಾಹರಣೆ ಇವೆ.  ಇದಲ್ಲದೇ ಇತ್ತೀಚೆಗೆ ಧಾರವಾಡದ ಉಚ್ಚ ನ್ಯಾಯಾಲಯ ಪೀಠವು 12 ಫೆ. 2021 ರಂದು ತೀರ​‍್ಪನನು ನೀಡಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವ ಕುರಿತು ನಿಯಮಾನುಸಾರ 3 ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚಿಸಿರುವುದು. ಇದರ ಜೊತೆಗೆ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ತ ಸದಸ್ಯರುಗಳ ಹಾಗೂ ಅತಿಥಿ ಉಪನ್ಯಾಸಕ ಪದಾಧಿಕಾರಿಗಳೊಂದಿಗೆ  15 ಮಾರ್ಚ 2021 ರಂದು ಜರುಗಿದ ಸಭೆಯಲ್ಲಿ ಸಚಿವರಾದ ತಾವು ಹಂತ-ಹಂತವಾಗಿ ಖಾಯಂ ಗೊಳಿಸುವ ಭರವಸೆಯನ್ನು ನೀಡಿದ್ದುಂಟು. ಈ ಹಿನ್ನೆಲೆಯಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ವಯೋಮಿತಿ ಮೀರುತ್ತಿರುವ ಅರ್ಹತೆ ಮತ್ತುಅನುಭವ ಹೊಂದಿದ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಲು ಹೆಚ್ಚಿನ ಆಸಕ್ತಿವಹಿಸಿ ತುರ್ತು ಕ್ರಮ ಕೈಗೊಳ್ಳಲು ಸಂಕನೂರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ