ಶಿಗ್ಗಾವ್

ಜಮೀನು ಅಕ್ರಮ ಸಕ್ರಮ ಅರ್ಜಿ ವಿಚಾರಣೆ ಕೈಗೊಳ್ಳುವಂತೆ ಒತ್ತಾಯ

ಜಮೀನು ಅಕ್ರಮ ಸಕ್ರಮ ಅರ್ಜಿ ವಿಚಾರಣೆ ಕೈಗೊಳ್ಳುವಂತೆ ಒತ್ತಾಯ

ಲೋಕದರ್ಶನ ವರದಿ 

ಶಿಗ್ಗಾವಿ 16: 1999ರಲ್ಲಿಯ ಅರ್ಜಿ ಫಾರಂ ನಂ 53ರ ಅಕ್ರಮ ಸಕ್ರಮ ಅರ್ಜಿಯನ್ನು ವಿಚಾರಣೆ ಕೈಗೊಳ್ಳುವಂತೆ ಹಳವತರ್ಲಗಟ್ಟ (ಕುನ್ನೂರ) ಗ್ರಾಮದ ಒಟ್ಟು 7 ಸರ್ವೆ ನಂಬರಗಳ 203 ಎಕರೆ 26 ಗುಂಟೆ ಜಮೀನಿನ ಸಾಗುವಳಿದಾರ ರೈತರು ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಅವರಿಗೆ ಮನವಿ ನೀಡಿ ಒತ್ತಾಯಿಸಿದರು. 

ಮೂಲತಃ ಇದು ಕಂದಾಯ ಭೂಮಿಯಾಗಿದ್ದು 1932 ಡನಂ 8,9ರಂತೆ ಕಾಶಿನಾಥ ಗುರುನಾಥ ಕುಲಕರ್ಣಿ ಇವರ ಮಾಲಿಕತ್ವ ಇದ್ದು ಕಾಲ ಕ್ರಮೇಣ ಕುನ್ನೂರ ಮತ್ತು ಹಳವತರ್ಲಗಟ್ಟ ಗ್ರಾಮದ 80 ಬಡ ಕೂಲಿ ಕಾರ್ಮಿಕರು ರೈತರು 40 ವರ್ಷಕ್ಕು ಮೇಲ್ಪಟ್ಟು ಸಾಗುವಳಿ ಮಾಡುತ್ತಾ ಜಮೀನನ್ನು ಉಳಿಮೆಗೆ ಯೋಗ್ಯ ಮಾಡಲು ಬಹಳಷ್ಟು ಶ್ರಮ ವಹಿಸಿದ್ದಾರೆ ನಮಗೆ ಉಳಿಗೆ ಮಾಡಲು ಹಾಗೂ ಮುಂದಿನ ಪೀಳಿಗೆಗೆಗಿ ಈ ಜಮೀನು ಬಿಟ್ಟು ಬೇರೆ ಜಮೀನು ಇರುವದಿಲ್ಲ, ಈ ಜಮೀನನ್ನೆ ನಂಬಿಕೊಂಡಿದ್ದೆವೆ ಮೂಲತಃ ಈ ಜಮೀನು ಕಂದಾಯ ಜಮೀನು ಆಗಿದ್ದು ಅರಣ್ಯ ಭೂಮಿ ಅಥವಾ ಕಾಯ್ದಿಟ್ಟ ಅರಣ್ಯ ಪ್ರದೇಶವಲ್ಲ, ಸರ್ಕಾರದ ಮಾಲಿಕತ್ವವಿದ್ದು 1987ರಲ್ಲಿಯೇ ಅತಿಕ್ರಮಣ ಭೂಮಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದೆವೆ ಜೊತೆಗೆ 1997-98 ರಿಂದ ಬೆಳೆದ ಬೆಳೆಗಳು ಪಹಣಿ ಪತ್ರದಲ್ಲಿ ದಾಖಲಾಗಿವೆ ಆದರಿಂದ ಈ ಕುರಿತು ಹಲವಾರು ಭಾರಿ ಮನವಿ ಸಲ್ಲಿಸಿದ್ದು 26-03-2021 ರಂದು ಉಚ್ಚ ನ್ಯಾಯಾಲಯದವರು ಮಾಡಿದ ಮರು ಆದೇಶವನ್ನು ಪುರಸ್ಕರಿಸಿ ನ್ಯಾಯ ಒದಗಿಸುವಂತೆ ಶಿಗ್ಗಾವಿ ತಹಶೀಲ್ದಾರರಿಗೂ ಹಾಗೂ ಸವಣೂರ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ​‍್ಿಸಿದ್ದಾರೆ. 


ಸುದ್ದಿ ಓದಿ