ಗ್ರಾಪಂ ಲೆಕ್ಕಾಧಿಕಾರಿ ಅವ್ಯವಹಾರ ತನಿಖೆ ನಡೆಸಿ ಕ್ರಮಕ್ಕೆ ಒತ್ತಾಯ
ಶಿಗ್ಗಾವಿ 14: ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಮಲ್ಲೂರ ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿ ನಡೆಸಿದ ಅವ್ಯವಹಾರವನ್ನು ತನಿಖೆ ಮಾಡಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ ಹಾಗೂ ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ ಕಾಳೆ ಅವರ ನೇತೃತ್ವದಲ್ಲಿ ತಹಶೀಲ್ದಾರ ಬಸವರಾಜ ಹೊಂಕಣದವರ ಅವರಿಗೆ ಮನವಿ ಅರ್ಪಿಸಿದರು.
ಮನವಿಯಲ್ಲಿ ಶಿಗ್ಗಾವಿ ತಾಲೂಕ ಹನುಮರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಮಲ್ಲೂರ ಗ್ರಾಮ ಲೆಕ್ಕಾಧಿಕಾರಿ ಮೆಹಬೂಬಸಾಬ ತೆಗ್ಗಿ ಇವರು ಕಂಕನವಾಡ ಹದ್ದಿನಲ್ಲಿ ರೈತರಿಗೆ ಸಬ್ಸಿಡಿ ಪೈಪಗಳನ್ನು ರೈತರ ಹೆಸರಿನಲ್ಲಿ ನೀರಾವರಿ ಅಂತ ಪ್ರಮಾಣ ಪತ್ರ ಕೊಟ್ಟಿರುತ್ತಾನೆ. ಕೊಳವೇ ಭಾವಿ ಇರದೇ ಇರುವ ರೈತರ ಹೆಸರಿನಲ್ಲಿ ನೀರಾವರಿ ಅಂತ ಪ್ರಮಾಣ ಪತ್ರ ಕೊಟ್ಟಿರುತ್ತಾನೆ ಬಂದಂತ ಸಬ್ಸಿಡಿ ಪೈಪ್ಗಳನ್ನು ರೈತರಿಗೆ ನೀಡದೆ ತನ್ನ ಉಪಯೋಗಕ್ಕಾಗಿ ಬಳಸಿಕೊಂಡಿರುತ್ತಾನೆ ಶಿಗ್ಗಾಂವ ನಗರದ ರೈತನಾದ ಅಬ್ದುಲ್ಖಾದರ ಅಬ್ದುಲ್ಗನಿ ಇವರಿಗೆ ಸಂಭದಿಸಿದ ರಿ.ಸ.ನಂ 31/1+26ಕ್ಷೇತ್ರ 07ಎ-20ಗುಂಟೆ ನೇದ್ದರ ಜಮೀನು ಕಂಕನವಾಡ ಹದ್ದಿನಲ್ಲಿದ್ದು ಮೇಲ್ಕಾಣಿಸಿದ ಗ್ರಾಮಲೆಕ್ಕಾಧಿಕಾರಿ ಮೆಹಬೂಬಸಾ ತೆಗ್ಗಿ ಸದರಿ ರೈತನಿಗೆ ಜಮೀನಿನಲ್ಲಿ ಕೊಳವೆಭಾವಿ ಹೊಂದಿರದಿದ್ದರೂ ಹೊಮದಿರುವದಾಗಿ ಪ್ರಮಾಣ ಪತ್ರ ನಿಡಿರುತ್ತಾರೆ. ಇವೆಲ್ಲ ನೋಡಲಾಗಿ ಸರ್ಕಾರಕ್ಕೆ ದ್ರೋಹವೆಸುಗುತ್ತಿರುವದು ಮೇಲ್ನೋಟಕ್ಕೆ ಕಾಣುತ್ತದೆ ಆದ್ದರಿಂದ ಸದರಿ ಲೆಕ್ಕಾಧಿಕಾರಿ ಮೇಲೆ ಕಠಿಣ ಕಾನೂನುಕ್ರಮ ಜರುಗಿಸಿ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಖಂಡ ರೈತ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಕಂಕನವಾಡ, ಕುರುಬ ಸಮಾಜದ ಅಧ್ಯಕ್ಷ ಪಕ್ಕೀರಪ್ಪ ಕುಂದೂರ, ಸೇರಿದಂತೆ ಇತರರು ಇದ್ದರು.