ಗಂಗಾವತಿ

ನಗರಸಭೆ ಸದಸ್ಯನ ಅಪಹರಣ: ಆರೋಪಿಗಳ ಬಂಧನಕ್ಕೆ ಆಗ್ರಹ

ನಗರಸಭೆ ಸದಸ್ಯನ ಅಪಹರಣ: ಆರೋಪಿಗಳ ಬಂಧನಕ್ಕೆ ಆಗ್ರಹ

ಗಂಗಾವತಿ ನವೆಂಬರ್ 04: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಪತಿ, ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಮತ್ತು ನಗರಸಭೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಮನೋಹರಸ್ವಾಮಿ ಮುದೇನೂರು ಹಿರೇಮಠರನ್ನು ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಬಂಧಿಸಿಬೇಕು ಎಂದು ಒತ್ತಾಯಿಸಿ ಪತ್ನಿ ಪೂಜಾ ಮತ್ತು ಕುಟುಂಬಸ್ಥರು ಬುಧವಾರ ಪೊಲೀಸ್ ಇನ್ಸಪೆಕ್ಟರ್‍ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಅಪಹರಣಕಾರರು ತಮ್ಮ ಪತಿಯನ್ನು ಕಾರವಾರ ಸಮೀಪ ಹಳಿಯಾಳಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅಲ್ಲಿನ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ ರೌಡಿ ಶೀಟರ್ ಕುರುಬರ ರವಿ ತನ್ನ ಪತಿಗೆ ಕಣ್ಣಿಗೆ ರಸಾಯನಿಕ ಸಿಂಪಡಿಸಿ ಕೈಕಾಲು ಕಟ್ಟಿ ಅಪಹರಿಸಿದ್ದಾರೆ. ಮನಬಂದಂತೆ ಥಳಿಸಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡಿರುವ ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ, ನವೀನಮಾಲೀಪಾಟೀಲ್, ಅಜಯ್ ಬಿಚ್ಚಾಲಿ, ಮಾಜಿ ಸದಸ್ಯರಾದ ಸಿದ್ದಾಪುರ ರಾಚಪ್ಪ, ರಮೇಶ ಚೌಡ್ಕಿ, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವೆಂಕಟೇಶ್,ಎಗ್ ರೈಸ್ ಬಂಡಿ ನಾಗ, ಸಂಘ ಪರಿವಾರದ ಮುಖಂಡ ಕೆಲೋಜಿ ಸಂತೋಷ ಅವರನ್ನು ಸಹ ಬಂಧಿಸಬೇಕು ಎಂದು ಅವರು ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.

ಗಲಿಬಿಲಿ:ಪೊಲೀಸರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖ್ಯಸ್ಥೆ ಶೈಲಜಾ ಹಿರೇಮಠ ಹಾಜರಾಗಿದ್ದು, ಮುದೇನೂರು ಕುಟುಂಬಸ್ಥರು ಗಲಿಬಿಲಿಗೊಳ್ಳಲು ಕಾರಣವಾಯಿತು. ಆಹ್ವಾನ ಇರದೆ ಶೈಲಜಾ ಪಾಲ್ಗೊಂಡಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಸುದ್ದಿ ಓದಿ