ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಣೆ
ಶಿಗ್ಗಾವಿ 07: ಕೊರೋನಾ ಒಂದನೇಯ ಅಲೆಗೆ ಚೀನಾವನ್ನು ದೋಷಿಸುತ್ತೇವೆ ಆದರೆ ಎರಡನೇಯ ಅಲೆಗೆ ಯಾರನ್ನು ದೋಷಿಸೋಣ. ಅದು ದೇಶದ ಆಳುವ ವರ್ಗದ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಲೈಂಗಿಕ ಅಲ್ಪಸಂಖ್ಯಾತ ರಾಜ್ಯ ಕಾರ್ಯದಶರ್ಿ ಅಕ್ಷತಾ.ಕೆ.ಸಿ ಆರೋಪಿಸಿದರು.ಪಟ್ಟಣದ ಹೊರವಲಯದಲ್ಲಿ ದಿವಂಗತ ದೇವರಾಜ ಅರಸ ಜಯಂತಿ ಹಾಗೂ ತಾಲೂಕಿನ ಕಾಂಗ್ರೆಸ ಮುಖಂಡ ಡಾ ಪಕ್ಕೀರಗೌಡ ಪಾಟೀಲ ಅವರ 67ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು ಅವ್ಯವಸ್ಥೆ ವ್ಯವಸ್ಥಿತವಾಗಿ ಬಡವರನ್ನು ಕೊಲ್ಲುತ್ತಿದೆ ಎಂದರು.
ನ್ಯಾಯವಾದಿ ಹನುಮಂತ ಬಂಡಿವಡ್ಡರ ಮಾತನಾಡಿ ಸಬಕಾ ಸಾತ್ ಸಬಕಾ ವಿಕಾಸ, ಅಚ್ಚೇ ದಿನ ಅಲ್ಲ ಎಲ್ಲರೂ ಸಾಯುವ ದಿನ ಬಂದೊದಗಿದೆ ? ಯಾರೇ ಸತ್ತರೂ ಸಹಿತ ನೋಡುವ ಪರಿಸ್ಥಿತಿ ಕಳಂಕ ತಾರತಮ್ಯದಿಂದ ಕೂಡಿದ ವ್ಯವಸ್ಥೆಯಾಗಿದೆ, ಕೊರೋನಾ ಎಂಬುದು ಸಹಿತ ಇದೊಂದು ದೊಡ್ಡ ದೊಡ್ಡ ಉದ್ಯಮಿ, ಕೈಗಾರಿಕೆದ್ಯೋಮಿಗಳ ಮಾಫಿಯಾ ಆಗಿದೆ. ಜೊತೆಗೆ ಕೊರೋನಾ ತುತರ್ು ಪರಿಸ್ಥಿತಿಯಲ್ಲಿ ಕಡೆಗಣಿಸಿದ ಲೈಂಗಿಕ ಅಲ್ಪಸಂಖ್ಯಾತ ವರ್ಗದ ಪದಾಧಿಕಾರಿಗಳಿಗೆ ಆಹಾರ ಕಿಟ್ ವಿತರಿಸಿ ನಿಮ್ಮೊಂದಿಗೆ ನಾವಿದ್ದೇವೆ ಅಲ್ಲದೇ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಮಂಗಳಮುಖಿಯರಿಗೆ ಆತ್ಮಸ್ಥೈರ್ಯವನ್ನು ತುಂಬಿದರು.ತಾಲೂಕ ಕಾಂಗ್ರೆಸ್ ವಕ್ತಾರ ಮಂಜುನಾಥ ಮಣ್ಣಣ್ಣವರ, ಗ್ರಾಮ ಪಂಚಾಯತ ಸದಸ್ಯ ಬಿ.ಸಿ.ಪಾಟೀಲ, ಸಾಮಾಜಿಕ ಜಾಲತಾಣ ಸಂಚಾಲಕ ಮಹಾಂತೇಶ ಸಾಲಿ, ಅನಿಲ ಭದ್ರಾಪೂರ, ಮಂಜುನಾಥ ಹುರುಳಿಕೊಪ್ಪಿ, ಮಹ್ಮದ ನರೇಗಲ್ ಸೇರಿದಂತೆ ಮಂಗಳಮುಖಿಯರು ಉಪಸ್ಥಿತರಿದ್ದರು