ತಾಳಿಕೋಟಿ

ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ: ಕೂಚಬಾಳ

ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ: ಕೂಚಬಾಳ


ತಾಳಿಕೋಟೆ10: ರಾಜ್ಯ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ಮನೆ, ಮನೆಗೆ ತಲುಪಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಘಟಿತ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಹೇಳಿದರು. 

ಅವರು ತಾಲೂಕಿನ ಬ.ಸಾಲವಾಡಗಿಯಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಸಶಕ್ತ ಬೂತ್ ಸದೃಡ ಭಾರತ ಕಾರ್ಯಕ್ರಮದಲ್ಲಿ ಪ್ರಚಾರ ಪತ್ರಿಕೆಗಳನ್ನು ನೀಡಿ ಮಾತನಾಡಿದರು. 

ಕಳೆದ ಎಂಟು ವರ್ಷದಿಂದ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ಕಾಮಗಾರಿ, ಬೆಳೆ ವಿಮಾ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಗರಿಬ್ ಕಲ್ಯಾಣ, ಅಟಲ್ ಪೆನ್ಷನ್, ಪ್ರಧಾನಮಂತ್ರಿ ಕಿಸಾನ್ ಸೇರಿದಂತೆ ಹಲವು ಅಭಿವೃದ್ಧಿ ನಿರ್ಧಾರಗಳು ಜನರಿಂದ ಪ್ರಶಂಸನೆಗೊಳಗಾಗಿವೆ. ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಪಡಿಸುವುದು, ಪೌರತ್ವ ತಿದ್ದುಪಡಿ ವಿಧೇಯಕ ಅಂಗೀಕಾರ, ಬಹುದಿನಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣದ ಮೂಲಕ ಮೋದಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಗತ್ತನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕೋವಿಡ್ ಒಡ್ಡಿದ ಪ್ರಬಲ ಸವಾಲನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಜತೆಗೆ ಜನರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವ ಮೂಲಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದ ದೇಶವನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದನ್ನು ವಿಶ್ವವೆ ಹೊಗಳುತ್ತಿದೆ, ಎಂದರಲ್ಲದೆ ಕೊರೊನಾ ನಿಯಂತ್ರಿಸಿದ್ದೇ ಎರಡೂ ಸರ್ಕಾರದ ಸಾಧನೆಗಳ ಕುರಿತು ಜನತೆಗೆ ತಿಳಿ ಹೇಳಬೇಕು. ಪಕ್ಷ ವನ್ನು ಸಂಘಟಿಸಬೇಕು. ಇದರಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂದರು. 

ಮುದ್ದೇಬಿಹಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ಬ.ಸಾಲವಾಡಗಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ 9  ಬೂತಗಳ ಮುಖ್ಯಸ್ಥರು, ಕಾರ್ಯಕರ್ತರು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು. 

ಮಂಜುನಾಥ ರತ್ನಾಕರ, ಮುದಕಣಗೌಡ ರಾರಡ್ಡಿ, ಗೌಡಪ್ಪಗೌಡ ವಠಾರ, ಮುದಕಣ್ಣಗೌಡ ಹೊರಗಿನಮನಿ, ಶಾಂತಗೌಡ ಕೋಳುರು, ಬಸನಗೌಡ ಚೊಕ್ಕಾವಿ, ಬಸವರಾಜ ದೊಡ್ಡಮನಿ, ಶಾಂತಗೌಡ ವಠಾರ, ಪ್ರಭುಗೌಡ ಬಿರಾದಾರ ಸೇರಿದಂತೆ  ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ