ಧಾರವಾಡ - ಹುಬ್ಬಳ್ಳಿ

ಡೆಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ;ಕುಸ್ತಿ ವಿಭಾಗದಲ್ಲಿ ಪ್ರಭಾವತಿ ಲಂಗೂಟಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ

ಡೆಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ;ಕುಸ್ತಿ ವಿಭಾಗದಲ್ಲಿ ಪ್ರಭಾವತಿ ಲಂಗೂಟಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ
Delhi National Championship; Prabhavati Languti wins first place in wrestling category for second co

ಲೋಕದರ್ಶನ ವರದಿ 

ಡೆಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ;ಕುಸ್ತಿ ವಿಭಾಗದಲ್ಲಿ ಪ್ರಭಾವತಿ ಲಂಗೂಟಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ 

ಧಾರವಾಡ 05: ದಿಲ್ಲಿಯ ಛತ್ರಿ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಎಸ್‌ಜಿಎಫ್‌ಐ ರಾಷ್ಟ್ರೀಯ ಚಾಂಪಿಯನ್‌ಶಿಫ್‌ನಲ್ಲಿ 39 ಕೆಜಿ ಕುಸ್ತಿ ವಿಭಾಗದಲ್ಲಿ ಧಾರವಾಡ ಕ್ರೀಡಾಶಾಲೆಯ ಪ್ರಭಾವತಿ ಲಂಗೂಟಿ ಅವರು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದು ಧಾರವಾಡ ಕ್ರೀಡಾ ವಸತಿ ನಿಲಯಕ್ಕೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ. 

ಚಿನ್ನದ ಪದಕ ವಿಜೇತೆಯಾದ ಪ್ರಭಾವತಿ ಲಂಗೂಟಿ ಅವರನ್ನು ನಿನ್ನೆ (ಫೆ.04) ಸಂಜೆ ಜಿಲ್ಲಾ ಪಂಚಾಯತದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ