ಬೈಲಹೊಂಗಲ

ದೀಪಾವಳಿ: ಚಿಕ್ಕಮಠ ಗುರುಭವನದಲ್ಲಿ ಮಹಾಲಕ್ಷ್ಮಿ ಯಜ್ಞ

ದೀಪಾವಳಿ: ಚಿಕ್ಕಮಠ ಗುರುಭವನದಲ್ಲಿ ಮಹಾಲಕ್ಷ್ಮಿ ಯಜ್ಞ

ಲೋಕದರ್ಶನ ವರದಿ 


ಬೈಲಹೊಂಗಲ 08: ಮಾನವನ ಜೀವನದ ನೆಮ್ಮದಿಗಾಗಿ ಪ್ರತಿನಿತ್ಯ ಅಧ್ಯಾತ್ಮ್ಮಿಕ ಚಿಂತನೆ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ದೊಡವಾಡ ಹಿರೇಮಠದ  ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ  ಹೇಳಿದರು. 

     ಅವರು ಆನಿಗೋಳ ಗ್ರಾಮದಲ್ಲಿ ವರ್ಷಪದ್ದತಿಯಂತೆ ಚಿಕ್ಕಮಠ ಗುರುಭವನದಲ್ಲಿ ದೀಪಾವಳಿಯ ನಿಮಿತ್ಯ ನರಕ ಚತುರ್ದಶಿಯಂದು ನಡೆದ ಮಹಾಲಕ್ಷ್ಮಿ ಯಜ್ಞ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತಿಗಾಗಿ ವರ್ಷಕ್ಕೆ ಎರಡು ಬಾರಿ ಯಜ್ಞ- ಹೊಮ - ಹವನ ಇತ್ಯಾದಿಗಳನ್ನು ಮಾಡಬೇಕು. ಇದನ್ನು ಮಾಡುವುದರಿಂದ, ದೈವಿಕ ಶಕ್ತಿ ಸದಾಕಾಲ ಮನುಷ್ಯರ ಮೇಲೆ ಪ್ರಭಾವ ಬೀರುತ್ತದೆ. ಮಹಾಲಕ್ಷ್ಮಿ ದೇವಿಯನ್ನು ತಮ್ಮ, ತಮ್ಮ ಮನೆಗಳಲ್ಲಿ ಭಕ್ತಿ ಮತ್ತು  ಗೌರವ ಭಾವದಿಂದ ಪೂಜಿಸಬೇಕು. ಇದನ್ನು ಮಾಡುವ ಮೂಲಕ, ತಾಯಿ ಲಕ್ಷ್ಮಿ ಆ ಕುಟುಂಬದ ಮೇಲೆ ತನ್ನ ಆಶೀರ್ವಾದದ ಸುರಿಮಳೆಯನ್ನೇ ಸುರಿಸುತ್ತಾಳೆ ಎಂದರು. 

       ಮುದ್ದಾಪುರ ಕಲ್ಮಠದ ಪ್ರಭುದೇವ ಸ್ವಾಮೀಜಿ, ಸೋಮಾಪುರದ ಸಿದ್ದಾರೂಡ ಮಠದ ಜಯದೇವ ಸ್ವಾಮೀಜಿ, ರಾಜ್ಯ ಜ್ಯೋತಿಷ್ಯ ರತ್ನ ಪ್ರಶಸ್ತಿ ವಿಜೇತ, ಆರ್ಯುವೇದ ಪಾರಂಪರಿಕ ವೈದ್ಯ ಬಸಲಿಂಗಯ್ಯ ಚಿಕ್ಕಮಠ ಸಾನಿಧ್ಯದಲ್ಲಿ ಮಹಾಲಕ್ಷ್ಮಿ ಯಜ್ಞ ಪೂಜಾ ವಿಧಿ ವಿಧಾನ ಮೂಲಕ ಅದ್ದೂರಿಯಾಗಿ ಜರುಗಿತು. 

    ಶ್ರೀಶೈಲ ಕಲ್ಮಠ, ಗುರುಶಾಂತ ತೆಂಗಿನಮಠ, ಅದೃಶ್ಯ ಹಿರೇಮಠ, ಬೇಡಜಂಗಮ ತಾಲೂಕಾಧ್ಯಕ್ಷ ಸಂತೋಷ್ ಪಶುಪತಿಮಠ, ಶಂಕ್ರಯ್ಯ ಹಿರೇಮಠ,  ಕೇದಾರಿ ಒಕ್ಕುಂದ,  ಈರ​‍್ಪ ಹುಬ್ಬಳ್ಳಿ, ದುಂಡಯ್ಯ ಹಿರೇಮಠ, ನಾಗೇಶ ಚಿಕ್ಕಮಠ, ನಾಗರಾಜ  ಗೌಡರ,  ಸಂತೋಷ ಹಿರೇಮಠ,  ಶಂಕರಯ್ಯ ಚಿಕ್ಕಮಠ, ಮಂಜುನಾಥ ಚಿಕ್ಕಮಠ, ಬಸ್ಸಪ್ಪ ಸುಣಗಾರ,  ಜಿಲ್ಲೆಯ ವಿವಿಧ  ತಾಲೂಕಿನ ಎಲ್ಲ ಭಕ್ತಾದಿಗಳು ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡರು. ನಂತರ ಮಹಾಪ್ರಸಾದ ಜರುಗಿತು. 


ಸುದ್ದಿ ಓದಿ