ಅಗಷ್ಠ 15ಕ್ಕೆ ಕೆರೆಗಳ ಮುಂದೆ ಧ್ವಜಾರೋಹಣಕ್ಕೆ ನಿರ್ಧಾರ
ಲೋಕದರ್ಶನ ವರದಿ
ರಾಣೇಬೆನ್ನೂರ 06: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಧೇಶನದಂತೆ ಆಜಾದಿ ಕಾ ಅಮೃತ ಮಹೋತ್ಸವದ ಆಚರೆಣೆಯ ಭಾಗವಾಗಿ ತಾಲೂಕಿನಲ್ಲಿ 14 ಕೆರೆಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ ಎಂದು ತಾ ಪಂ ಇಓ ಟಿ.ಆರ್ ಮಲ್ಲಾಡದ ತಳಿಸಿದರು.
ಹೆಡಿಯಾಲ ಗ್ರಾಮದಲ್ಲಿ ನಡೆಯುತ್ತಿರುವ ಸಣ್ಣಕೆರೆ/ಹೊಂಡ ಕಾಮಗಾರಿಯನ್ನು ಗುರುವಾರ ಪರಿಶಿಲಿಸಿ ಮಾತನಾಡಿದ ಅವರು, 75 ನೇ ಸ್ವಾತಂತ್ರ್ಯ ಮಹೋತ್ಸವದ ಸವಿ ನೆನಪಿಗಾಗಿ ಅಮೃತ ಸರೋವರಗಳು ಎಂದು ನಾಮಕರಣ ಮಾಡಿದ್ದು 15ರಂದು ಸ್ವಾತಂತ್ರ್ಯ ಹೋರಾಟಗಾರರು ಅಥವಾ ಕುಟುಂಬದ ಸದಸ್ಯರಿಂದ, ಮಾಜಿ ಸೈನಿಕರು ಮತ್ತು ಸ್ಥಳೀಯ ಗ್ರಾಪಂನ ಹಿರಿಯ ನಾಗರಿಕರಿಂದ ಕೆರೆಗಳ ಮುಂದೆ ಧ್ವಜಾರೋಹಣ ಮಾಡಿ ಸ್ವಾತಂತ್ರೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಮೃತ ಸರೋವರದ ಯೋಜನೆಯಡಿ ನಿರ್ಮಾಣವಾದ ಕೆರೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು, ಹಸಿರು ಹುಲ್ಲು ನೆಟ್ಟು ಹಸಿರನ್ನು ಅಭಿವೃದ್ದಿಪಡಿಸಲಾಗುವುದು ಹಾಗೂ ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸುವುದರ ಜೊತೆಗೆ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಆಸನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಪರಿಸರ ರಕ್ಷಣೆಯ ಮತ್ತು ನಿಸರ್ಗ ಸಂಸ್ಕೃತಿ ಕಾಪಾಡುವ ಉದ್ದೆಶದಿಂದ ಹಾಗೂ ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ವಿಷೇಶ ಆದ್ಯತೆ ನೀಡಲಾಗಿದೆ. ಗ್ರಾಮೀಣ ಸಮುದಾಯದಲ್ಲಿ ಸಮರ್ಕ ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತಂತೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿವೆ, ಅಗಷ್ಠ 15ರೊಳಗೆ ತಾಲೂಕಿನ ಹೆಡಿಯಾಲ ಕಜ್ಜರಿ ಕಮದೋಡ ಗ್ರಾಮ ಪಂಚಾತಿಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಗಳು ಸಂಪೂರ್ಣವಾಗಿ ಮುಕ್ತಾಯವಾಗುತ್ತಿದ್ದು ಇನ್ನುಳಿದ ಕಾಮಗಾರಿಗಳನ್ನು 2022-23 ನೇ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಟಿ.ಆರ್ ಮಲ್ಲಾಡದ ತಿಳಿಸಿದರು.
ಈ ಸಂಧರ್ಬದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಗಿರಿಜವ್ವ ನಿ ಪೂಜಾರ,ಉಪಾಧ್ಯಕ್ಷರಾದ ಮಹದೇವಕ್ಕ ಈರ್ಪ ಕುರುಬರ ಗ್ರಾ ಪಂ ಸದಸ್ಯರಾದ ಸುರೇಶ ಉ ಅರಳಿ, ಮಹೇಶಪ್ಪ ಮಾಸಣಗಿ, ಬಸವರಾಜ ಮಜ್ಜಗಿ,ಬಸವರಾಜ ಗೋ ಚಪ್ಪರದಳ್ಳಿ ತಾ.ಪಂ ಸಹಾಯಕ ನಿರ್ದೇಶಕರು ಬಿ.ಎಸ್ ಪಾಟೀಲ ಗ್ರಾ.ಪಂ ಅಧಿಕಾರಿ ರೂಪಾವತಿ ಡಿ ಶಿರಗಾಪೂರ ತಾಂತ್ರಿಕ ಸಂಯೋಜಕರು ರವಿಕುಮಾರ ಯಾಳಗಿ ಐಇಸಿ ಸಂಯೋಜಕರು ಡಿ.ವಿ ಅಂಗೂರ ತಾಂತ್ರಿಕ ಸಹಾಯಕರು ಕಿಶೋರ್ ಉಪಸ್ಥಿತರಿದ್ದರು.