ಜನಸಾಮಾನ್ಯರ ಧೈರ್ಯ ತುಂಬಲು ಮಠಾಧೀಶರ ಸಭೆಯಲ್ಲಿ ತೀರ್ಮಾನ
ತಾಳಿಕೋಟೆ 08: ಕೊರೊನಾ ಅಲೆಯಿಂದ ಜನಸಾಮಾನ್ಯರು ತತ್ತರಿಸಿದ್ದು ಮಠಾಧೀಶರು ಅವರಿಗೆ ಸಾಂತ್ವನ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಸೇರಿದ್ದ ವಿಜಯಪುರ ಜಿಲ್ಲಾ ಮಠಾಧೀಶರ 15ನೇಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ದೇಶದ ಬೆನ್ನೆಲುಬಾದ ರೈತರ ನೆರವಿಗೆ ಮಠಾಧೀಶರು ಬರಬೇಕು. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ಅನುದಾನ ಒದಗಿಸುವಂತೆ ಹಾಗೂ ಶೀಘ್ರವಾಗಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಎಂದು ತಿರ್ಮಾನಿಸಲಾಯಿತು. ಸಭೆಯಲ್ಲಿ ಕೊರೊನಾ ಎರಡನೆಯ ಅಲೆಯಲ್ಲಿ ಜೀವ ಕಳೆದುಕೊಂಡ ಶ್ರೀಗಳು, ಜನ ಸಾಮಾನ್ಯರು, ಹುತಾತ್ಮ ಯೋಧರಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು. ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರಮರಣ ಹೊಂದಿದ್ದ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಲು ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ತಿಮಾನಿಸಲಾಯಿತು ಎಂದರು.
ಅಧ್ಯಕ್ಷತೆಯನ್ನು ಇಂಡಿ ತಾಲ್ಲೂಕಿನ ಖೇಡಗಿ ವಿರಕ್ತಮಠದ ಶಿವಬಸವರಾಜೇಂದ್ರಸ್ವಾಮಿಗಳು, ನೇತೃತ್ವವನ್ನು ಬಬಲೇಶ್ವರ ಶ್ರೀಗಳು ವಹಿಸಿದ್ದರು. ಢವಳಗಿ ಶ್ರೀಗಳು ಸಭೆಯ ಸಂಚಾಲಕತ್ವವನ್ನು ವಹಿಸಿದ್ದರು. ಗುಂಡಕನಾಳ ಗುರುಲಿಂಗ ಶಿವಾಚಾರ್ಯರು ಸ್ವಾಗತಿಸಿದರು. ಸಭೆಯಲ್ಲಿ ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, ಸಿಂದಗಿ ಸಾರಂಗಮಠದ ಶ್ರೀಗಳು, ಬಂಥನಾಳಶ್ರೀಗಳು, ಒಕ್ಕೂಟದ ಕಾರ್ಯದರ್ಶಿ ಆಲಮೇಲ ಹಿರೇಮಠ ಶ್ರೀಗಳು ಸೇರಿದಂತೆ 60ಕ್ಕೂ ಹೆಚ್ಚು ಶ್ರೀಗಳು ಉಪಸ್ಥಿತರಿದ್ದರು