ಬ್ಯಾಡ್ಗಿ

ಗೌಂಡಿ ಕಾರ್ಮಿಕ ಕಾಲು ಜಾರಿ ಬಿದ್ದು ಮೃತ

ಗೌಂಡಿ ಕಾರ್ಮಿಕ ಕಾಲು ಜಾರಿ ಬಿದ್ದು ಮೃತ

ಬ್ಯಾಡಗಿ 07: ಪಟ್ಟಣದ ಬೆಟ್ಟದ ಮಲ್ಲೇಶ್ವರ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸುತ್ತಿರುವ ಶಾಲಾ ಕಟ್ಟಡಕ್ಕೆ ಹಾಕಲಾಗಿದ್ದ ಸಾರ್ವೆಯನ್ನು ಬಿಚ್ಚಲು ಹೋದ ಗೌಂಡಿ ಕೆಲಸಗಾರನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ರವಿವಾರ ಜರುಗಿದೆ.ಮೃತಪಟ್ಟ ವ್ಯಕ್ತಿಯನ್ನು ಮಹಬೂಬಸಾಬ ಇಮಾಮಹುಸೇನಸಾಬ ನಾಗನೂರ (58) ಎನ್ನಲಾಗಿದೆ. ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ ಮಹಬೂಬಸಾಬ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಡಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ