ಬ್ಯಾಡ್ಗಿ

ರತ್ನಮ್ಮ ರುದ್ರಗೌಡ ಭದ್ರಗೌಡ್ರಮಾಸ್ತರ ನಿಧನ

ರತ್ನಮ್ಮ ರುದ್ರಗೌಡ ಭದ್ರಗೌಡ್ರಮಾಸ್ತರ ನಿಧನ

ಬ್ಯಾಡಗಿ 20: ಪಟ್ಟಣದ  ಸಮಾಜ ಸೇವಕಿ ರತ್ನಮ್ಮ ರುದ್ರಗೌಡ ಭದ್ರಗೌಡ್ರಮಾಸ್ತರ (95)ಅವರು ರವಿವಾರ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಸೇರಿದಂತೆ ಅಪಾರ ಬಂದುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ  ಸೋಮವಾರ ಮದ್ಯಾಹ್ನ 12 ಗಂಟೆಗೆ ಸ್ಥಳೀಯ ಮುಕ್ತಿ ಧಾಮದಲ್ಲಿ  ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಗಣ್ಯರ ಸಂತಾಪ: ರತ್ನಮ್ಮರುದ್ರಗೌಡ ಭದ್ರಗೌಡ್ರ ಮಾಸ್ತರ (95)ಅವರ ನಿಧನಕ್ಕೆ ಶಾಸಕ ಬಸವರಾಜ ಶಿವಣ್ಣನವರ,ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ್, ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ  ಎಸ್‌.ಆರ್‌.ಪಾಟೀಲ, ಪುರಸಭೆ ಸದಸ್ಯೆ ಸರೋಜಾ ಉಳ್ಳಾಗಡ್ಡಿ, ತಿರಕಪ್ಪ ಮರಬಸಣ್ಣವರಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ 


ಸುದ್ದಿ ಓದಿ