ಎಂ.ಬಿ.ಹುಲಗಣ್ಣನವರ ನಿಧನ; ಸಾಹಿತ್ಯ ಪರಿಷತ್ತಿನಲ್ಲಿ ಭಾವಪೂರ್ಣ ಶ್ರದ್ದಾಂಜಲಿ
ರಾಣೇಬೆನ್ನೂರು 08: ಹಿರಿಯ ಸಾಹಿತಿ, ಸಾಮಾಜಿಕ ಚಿಂತಕ, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಂ.ಬಿ.ಹುಲಗಣ್ಣವರ (84) ಅವರು ಶನಿವಾರ ಮುಂಜಾನೆ ತಮ್ಮ ಸ್ವ ಗೃಹದಲ್ಲಿ ಆಕಸ್ಮಿಕ ನಿಧನ ಹೊಂದಿದರು.
ಮೃತರ ನಿಧನಕ್ಕೆ ಇಲ್ಲಿನ ವಾಗೀಶ ನಗರದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ ನಗರ ಮತ್ತು ತಾಲೂಕಿನ ಸಾಹಿತಿಗಳು, ಕಲಾವಿದರು, ವರ್ತಕರು ಮೃತರ ನಿಧನಕ್ಕೆ ತಮ್ಮ ಪುಷ್ಪ ನಮನ ಸಲ್ಲಿಸಿ ತೀವ್ರ ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಅಧ್ಯಕ್ಷ ವೀರೇಶ್ ಜಂಬಿಗಿ, ಪ್ರಭಾಕರ ಶಿಗ್ಲಿ, ಜೆ.ಎಂ.ರಾಜಶೇಖರ, ಎಸ್.ಸಿ.ಹುಲ್ಲತ್ತಿ, ಡಾಽಽ ಕೆ.ಹೆಚ್.ಮುಕ್ಕಣ್ಣನವರ, ಸಿ.ಎನ್.ಜಗದೇವನವರ, ಎ.ಬಿ.ರತ್ನಮ್ಮ, ನಿರ್ಮಲಾ ಲಮಾಣಿ, ಚಂದ್ರಶೇಖರ ಮಡಿವಾಳರ, ರಮೇಶ ಬಡಕರಿಯಪ್ಪನವರ, ಜಗದೀಶ ಮಳಿಮಠ, ಬಿ.ಪಿ.ಶಿಡೇನೂರ, ವಿದ್ಯಾವತಿ ಜಂಗಿನ, ಹೆಚ್.ಹೆಚ್.ಜಾಡರ, ಹೆಚ್.ಎಸ್.ಮುದಿಗೌಡ್ರ, ಎಸ್.ಎಸ್.ಮೇಟಿ, ನಾಗರಾಜ ಗುಡಿಹಾಳ ಸೇರಿದಂತೆ ಮತ್ತಿತರರು ಪಾಲ್ಗೊಂಡು ಅವರ ಸೇವಾ ಕಾರ್ಯ ಕುರಿತು ಸ್ಮರಿಸಿದರು.