ಬ್ಯಾಡ್ಗಿ

ಗೌರಮ್ಮ ಕೊಪ್ಪದ ನಿಧನ

ಗೌರಮ್ಮ ಕೊಪ್ಪದ ನಿಧನ

ಬ್ಯಾಡಗಿ 21: ಪಟ್ಟಣದ ಸೋಗಿ ಓಣಿ ನಿವಾಸಿ ಗೌರಮ್ಮ ಕನ್ನಪ್ಪ ಕೊಪ್ಪದ (74) ಇವರು ಏ. 20ರಂದು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ದಿ.ಕನ್ನಪ್ಪ ಕೊಪ್ಪದ ಅವರ ಪತ್ನಿಯಾಗಿದ್ದ ಇವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ. ಗಣ್ಯರ ಸಂತಾಪ: ಗೌರಮ್ಮ ಅವರ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಬಸವರಾಜ ಶಿವಣ್ಣನವರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ನಿವೃತ್ತ ಅಡಿಶನಲ್ ಎಸ್ಪಿ ಜಿ.ಎಂ.ದೇಸೂರ, ಪುರಸಭೆ ಅಧ್ಯಕ್ಷ್ಷೆ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ರೈತ ಮುಖಂಡ ಗಂಗಣ್ಣ ಎಲಿ, ಗ್ರಾಮದೇವತಾ ಸಮಿತಿಯ ಪುಟ್ಟಪ್ಪ ಛತ್ರದ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸುದ್ದಿ ಓದಿ