ಮಹದೇವಪ್ಪ ಕುರುಬರ ನಿಧನ
ಬ್ಯಾಡಗಿ 11: ಪಟ್ಟಣದ ಸಂಗಮೇಶ್ವರ ನಗರದ ನಿವಾಸಿ ಹಾಗೂ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಪ್ರತಿನಿಧಿ ಮಹದೇವಪ್ಪ ಕುರುಬರ (53) ಅನಾರೋಗ್ಯದ ಕಾರಣ ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಸೇರಿದಂತೆ ಈರ್ವರು ಪುತ್ರರಿದ್ದು ಅಂತ್ಯಕ್ರಿಯೆಯು ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಸಂಜೆ ನೆರವೇರಿತು. ಮೃತರು ಬಹು ವರ್ಷಗಳಿಂದ ಎಲ್ಐಸಿ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಪ್ರತಿನಿಧಿಗಳ ಪತ್ತಿ ಸಹಕಾರ ಸಂಘದ ನಿರ್ದೇಶಕರಾಗಿದ್ದರು.
ಸಂತಾಪ: ಮೃತರ ನಿಧನಕ್ಕೆ ಸ್ಥಳೀಯ ಶಾಖೆಯ ಪ್ರಭಾರಿ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಅಭಿವೃದ್ಧಿ ಅಧಿಕಾರಿಗಳಾದ ರವಿ ಮುಗದುಮ್, ಎ.ಎಂ.ಖಾಜಿ, ವಿಶಾಲ್ ಜಿಂಗಾಡೆ, ಎನ್.ಎಸ್.ಕೋಳೇರ, ವಿಕ್ರಮ್, ಎಸ್.ಎಸ್.ಜೋಶಿ ಸೇರಿದಂತೆ ಪ್ರತಿನಿಧಿಗಳ ಸಂಘದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಸಂತಾಪ ಸೂಚಿಸಿದ್ದಾರೆ.