ಕಾರವಾರ

ವೃಷಭರಾಜ(ಪುಟ್ಟಣ್ಣಾ) ನಿಧನ

ವೃಷಭರಾಜ(ಪುಟ್ಟಣ್ಣಾ) ನಿಧನ

ಮುಂಡಗೋಡ 16: ಪಟ್ಟಣದ ಪದ್ಮಾಂಬಾ ಬುಕ್ ಸ್ಟಾಲ್ (ಪುಸ್ತಕ ಅಂಗಡಿ) ಮಾಲಿಕ ವೃಷಭರಾಜ(ಪುಟ್ಟಣ್ಣಾ) ಅಂಗಡಿ(56) ಕೊರೊನಾ ದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ. ಪಟ್ಟಣದಲ್ಲಿ ಪುಟ್ಟಣ್ಣ ಎಂದು ಚಿರಪರಿಚಿತರಾಗಿದ್ದ ಅವರು, ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. ಸರಳ ಸಜ್ಜನಿಕೆಯಿಂದ ಅಪಾರ ಸ್ನೇಹಿತರನ್ನು ಹೊಂದಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರರನ್ನು ಸೇರಿದಂತೆ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಬಿಜೆಪಿ ಧುರೀಣರು ಕಾರ್ಯಕರ್ತರು ಸ್ನೇಹಿತರು ಕಂಬನಿ ಮಿಡಿದಿದ್ದಾರೆ. 


ಸುದ್ದಿ ಓದಿ