ಅಡಿವೆಪ್ಪ ಎಲಿ ನಿಧನ
ಬ್ಯಾಡಗಿ 14: ಇಲ್ಲಿನ ನೆಹರು ನಗರದ ನಿವಾಸಿ ಕೃಷಿಕ ಸಮಾಜದ ಮುಖಂಡ ಅಡಿವೆಪ್ಪ ಕಲ್ಲಪ್ಪ ಎಲಿ (88) ಅನಾರೋಗ್ಯದ ಕಾರಣ ಫೆ.13ರಂದು ಶನಿವಾರ ಸಂಜೆ ನಿಧನರಾದರು.
ಮೃತರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ, ಪಟ್ಟಣದ ವೀರಶೈವ ಮುಕ್ತಿಧಾಮದಲ್ಲಿ ಫೆ.14 ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.