ಪ್ರಕರಣವೊಂದರ ಸಾಕ್ಷಿಗಾಗಿ ದಯಾನಂದ ಮೀನಾ ಜಮಖಂಡಿಗೆ
ಜಮಖಂಡಿ 24: ತಾಲೂಕಿನ ಪುನರ್ವಸತಿ ಕೇಂದ್ರ ವ್ಯಾಪ್ತಿಯಲ್ಲಿ ಒಳಗೊಂಡ ಮುಳಗಡೆ ಪ್ರದೇಶದ ಜಾಗೆಯನ್ನು ಅಕ್ರಮವಾಗಿ 2001ರಲ್ಲಿ ಕೆಲ ಗ್ರಾಮಸ್ಥರು ನಕಲಿ ದಾಖಲೆಗಳನ್ನು ಸೃಷ್ಠಿಸಿದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಅಧಿಕಾರಿಗಳಿಗೆ ಆದೇಶ ಹೊರಡಿಸಿದ ಹಿಂದಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ದಯಾನಂದ ಮೀನಾ ಅವರು ಜಮಖಂಡಿಯ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ಸಾಕ್ಷಿಗಾಗಿ ಆಗಮಿಸಿದರು.
ನಗರದ ರಮಾ ನಿವಾಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. 2001ರಲ್ಲಿ ಪ್ರಕರಣ ದಾಖಲಾಗಿತ್ತು. 2011ರಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆದೇಶ ಹೊರಡಿಸಿದೆ. ಇವಾಗ ಅದೇ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಆಗಮಿಸಿದ್ದೇನೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ದಯಾನಂದ ಮೀನಾ ಅವರು ಮಾಹಿತಿ ನೀಡಿದರು.ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ, ತಹಶೀಲ್ದಾರ ಸದಾಶಿವ ಮಕ್ಕೋಜಿ, ಸರಕಾರಿ ಅಭಿಯೋಜಕ ವನಮಾಲಾ ಮೋತೆ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಇದ್ದರು.