ರಾಣೆಬೆನ್ನೂರ

ಬೆನ್ನುಹುರಿ ಅಪಘಾತ ವ್ಯಕ್ತಿಗಳ ಪುನಃಚೇತನ

ಬೆನ್ನುಹುರಿ ಅಪಘಾತ ವ್ಯಕ್ತಿಗಳ ಪುನಃಚೇತನ

ರಾಣೆಬೆನ್ನೂರು 08:  ಅಪಘಾತಗಳು ಆಕಸ್ಮಿಕ, ಎಲ್ಲವು ದೈವ ಲಿಖಿತ, ಯಾವುದು ಪ್ರಾರಬ್ಧಕರ್ಮ ವಲ್ಲ. ಜೀವನದಲ್ಲಿ ಬರುವುದೆಲ್ಲವನ್ನು  ಸ್ವಾಗತಿಸಬೇಕು, ಆಗಿದ್ದನ್ನು ಅನುಭವಿಸಬೇಕು ಇದ್ಯಾವುದು ಪೂರ್ವನಿಯೋಜಿತವಲ್ಲ  ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದ ಜಿ ಮಹಾರಾಜ್ ನುಡಿದರು. ಅವರು ಇಲ್ಲಿನ ಮೆಡ್ಲೇರಿ  ರಸ್ತೆಯ, ಓಂ ಆಸ್ಪತ್ರೆ, ನಿಶಾರ್ಡ್‌ ಸೇವಾ ಸಂಸ್ಥೆ ಬೆಂಗಳೂರು ಎಪಿಡಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬೆನ್ನುಹುರಿ ವಿಕಲಚೇತನರ ವ್ಯಕ್ತಿಗಳ ದಿನಾಚರಣೆ ಹಾಗೂ ಪುನಃಚೇತನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

ಅಪಘಾತಕ್ಕೊಳಗಾದವರು ಬಂದಿರುವುದನ್ನು ಎದುರಿಸಿ, ಆತ್ಮವಿಶ್ವಾಸ ಕಳೆದುಕೊಳ್ಳದೆ ಬದುಕಿನಲ್ಲಿ  ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮತ್ತು ಆತ್ಮವಿಸ್ವಾಸ ಹೊಂದಬೇಕುಇದ ರಿಂದ ಮಾತ್ರ ಪುನಃಚೈತನ್ನ ಹೊಂದಲು ಸಾಧ್ಯವಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವೈದ್ಯ ಮನೋಜ್ ಸಾಹುಕಾರ, ಅವರು  ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಿಶಾರ್ಡ್‌ ಸಂಸ್ಥೆಗೆ 39 ವರ್ಷಗಳ ಸಂಭ್ರಮ. ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು, ಪೂರ್ವಜನ್ಮದ ಪುಣ್ಯದ  ಫಲವೆಂದು ಭಾವಿಸಿದ್ದೇವೆ. ಸಮಾಜದಲ್ಲಿ ಸಮಾನತೆ ಬದುಕನ್ನು ಸಾಗಿಸಲು ಇಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸವನ್ನು  ಕಳೆದುಕೊಳ್ಳುವ ಅಗತ್ಯವಿಲ್ಲ. ಎಲ್ಲ ರೀತಿಯ ಸಹಾಯ-ಸಹಕಾರ ಮತ್ತು ಇತರರಂತೆ ಬದುಕು ಸಾಗಿಸುವ ಕುರಿತು ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಎಲ್‌ಐಸಿ ಮುಖ್ಯ ವ್ಯವಸ್ಥಾಪಕ ಪ್ರಕಾಶ ಸಂಶಿ ಅವರು,ಓಂ ಮತ್ತು ನಿಶಾರ್ಡ್‌ ಸಂಸ್ಥೆ ಉತ್ತಮ ಕೆಲಸ ಮಾಡುತ್ತಲಿದೆ. ವಿಕಲಚೇತನರಿಗಾಗಿ, ಮೊಬೈಲ್ ವಾಹನವೊಂದು, ಅಗತ್ಯವಿರುವುದನ್ನು ಕಂಡಿದ್ದೇವೆ. ಅದಕ್ಕಾಗಿ ಮುಖ್ಯ ವ್ಯವಸ್ಥಾಪಕರೊಂದಿಗೆ, ಸಮಾಲೋಚನೆ ಮಾಡಿ ಎಲ್‌ಐಸಿಯಿಂದ ಮೊಬೈಲ್ ವಾಹನ ಕೊಡುಗೆಯಾಗಿ ದೊರಕಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.  

ಶಾಖಾ ಅಭಿವೃದ್ಧಿ ಅಧಿಕಾರಿ, ಸೋಮಶೇಖರ ಮುಂಡರಗಿ ಅವರು  ಸಮಾಜ ಮತ್ತು ವಿಕಲಚೇತನರು ಭವಿಷ್ಯದ ಬದುಕು ಹೇಗೆ ವಿಷಯ ಕುರಿತು ಮಾತನಾಡಿದರು. ನಿಶಾರ್ಡ್‌ ಸಂಸ್ಥೆ ಅಧ್ಯಕ್ಷ ರುಕ್ಮಿಣಿ ಸಾಹುಕಾರ್ ಅವರು ಸಂಸ್ಥೆಯ ಉದ್ದೇಶಿತ ಯೋಜನೆಗಳ ಕುರಿತು, ಮಾತನಾಡಿದರು ಎಪಿಡಿ ಸಂಸ್ಥೆಯ ಕರ್ನಾಟಕ ಮುಖ್ಯಸ್ಥ ಚನ್ನಪ್ಪ ಕುಂಬಾರ್ ಅವರು ಮಾತನಾಡಿ, ಸಂಸ್ಥೆ 5 ರಾಜ್ಯದಲ್ಲಿ ತನ್ನ ಕೆಲಸ ಮಾಡುತ್ತಲಿದೆ.1957ರಲ್ಲಿ ಪ್ರಾರಂಭವಾದ ಸಂಸ್ಥೆ ವಿವಿಧ  ಸಂಘ, ಸಂಸ್ಥೆಗಳ  ಸಹಯೋಗದಲ್ಲಿ ವಿಕಲಚೇತನರಿಗೆ ಪುನ:ಶ್ಚೇತನ ಕಾರ್ಯಾಗಾರದ ಮೂಲಕ ಹೊಸ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಎಪಿಡಿ ಮತ್ತು ನಿಶಾರ್ಡ, ಓಂ ಸಂಸ್ಥೆ ಉಚಿತವಾಗಿ ಕೊಡಮಾಡಿದ ವಿವಿಧ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು. ವಿವಿಧ ಸಂಸ್ಥೆಗಳ ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಚ್‌. ಕೆ.ಸೌಮ್ಯ ಪ್ರಾರ್ಥಿಸಿದರು. ಸುಷ್ಮಾ ಸ್ವಾಗತಿಸಿದರು. ನಿಂಗಪ್ಪ ದೊಡ್ಡಮನಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ