ಎಸ್‌ಡಿಎಂಸಿ ಅಧ್ಯಕ್ಷರಾಗಿ ದಾವಲಸಾಬ ಹುಬ್ಬಳ್ಳಿ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 13: ತಾಲೂಕಿನ ಹೊಸುರ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ದಾವಲಸಾಬ ಮದರಸಾಬ ಹುಬ್ಬಳ್ಳಿ ಆಯ್ಕೆಯಾಗಿದ್ದು, ಸದಸ್ಯರಾಗಿ ಧರೆಪ್ಪ ಡವಗಿ, ಉಮೇಶ ತವನಪ್ಪನವರ, ಮಂಜುಳಾ ದೊಡ್ಡಮನಿ,ರಮೇಶ ಅದರಗುಂಚಿ, ಚೇತನಾ ಶೆಟ್ಟರ, ವೀರಭದ್ರ್ಪ ಪಾಟೀಲ, ಶಾಂತವ್ವ ಸುಣಗಾರ, ನಾನಪ್ಪ ಲಮಾಣಿ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಗೆ ತಿಳಿಸಿದ್ದಾರೆ.