ಶಿಗ್ಗಾವ್

ಎಸ್‌ಸಿ ಮೋರ್ಚಾದಿಂದ ಕರಾಳ ದಿನ ಆಚರಣೆ

ಎಸ್‌ಸಿ ಮೋರ್ಚಾದಿಂದ ಕರಾಳ ದಿನ ಆಚರಣೆ

ಶಿಗ್ಗಾವಿ 26: 23-6-1975 ಈ ದೇಶದಲ್ಲೋಂದು ಕಪ್ಪು ಚರಿತ್ರೆಯ ದಿನ ಎಂದು ಇತಿಹಾಸದಲ್ಲಿ ದಾಖಲು ಮಾಡಬಹುದಾಗಿದೆ. ಕಾರಣದಿಂದ ಪ್ರತಿವರ್ಷವೂ ಜೂನ್ 25 ರಂದು  ಬಿಜೆಪಿ ಪಕ್ಷವು ಕರಾಳ ದಿನವನ್ನು  ಆಚರಿಸುತ್ತದೆ ಎಂದು ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ. ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂದು ರಾಷ್ಟ್ರದ ಪ್ರಧಾನಿಯಾದ ಶ್ರೀಮತಿ ಇಂದಿರಾಗಾಂಧಿ ತನ್ನ ಪದವಿಗೆ ಚ್ಯುತಿ ಬಂದ ಕಾರಣ ತನ್ನ ಸರ್ವಾಧಿಕಾರದ ಧೋರಣೆಯಿಂದ ವ್ಯವಸ್ಥೆಯ ದುರ್ಬಳಿಕೆ ಮಾಡಿಕೊಂಡು ಸಕಾರಣವಿಲ್ಲದೆ ದೇಶದಲ್ಲಿ ರಾಷ್ಟ್ರೀಯ ತುರ್ತುಪರಸ್ಥಿತಿ ಹೇರಿದರು. ಪ್ರತಿ ನಾಗರೀಕನಿಗೂ ಸಾಂವಿಧಾನಿಕವಾಗಿ ದೊರೆಕ್ಕಿದ್ದ ಹಕ್ಕುಗಳನ್ನು ಜೀವನವನ್ನು ಕಸಿದುಕೊಂಡು ಇಡೀ ದೇಶವನ್ನೇ ಕ್ರೌರಕ್ಕೆ ತಳ್ಳಲ್ಪಡಲಾಯಿತು. ಈ ಒಂದು ವಿಲಕ್ಷಣ ನಡೆಯನ್ನು ನಮ್ಮ ಪಕ್ಷದ ರಾಜ್ಯ ಎಸ್‌ಸಿ ಮೋರ್ಚಾವು ವಿರೋಧಿಸುತ್ತದೆ. 

ಕಾಂಗ್ರೇಸ ಪಕ್ಷವು ದೇಶದ ಸ್ವತಂತ್ರದ ನಂತರ ತನ್ನ ಮತರಾಜಕಾರಣಕ್ಕಾಗಿ ಅಧಿಕಾರದ ದಾಹಕ್ಕಾಗಿ ದಲಿತರ ಮತಗಳಿಗಾಗಿ ಡಾ.ಬಿ.ಆರ್‌.ಅಂಬೇಡ್ಕರರವರ ಆದರ್ಶ ಪಾಲಿಸುವವರು ನಾವು ದಲಿತರ ಉದ್ದಾರ ಮಾಡುವವರು ಎಂದು ಡಾ.ಬಿ.ಆರ್‌.ಅಂಬೇಡ್ಕರ ರವರ ಪ್ರಜಾಪ್ರಭುತ್ವ ಆಶಯದ ಸಂವಿಧಾನವನ್ನು ಮತ್ತು ಈ ದೇಶವನ್ನು ಕತ್ತಲೆಗೆ ತಳ್ಳಿ ಮಾನವ ಹಕ್ಕುಗಳನ್ನೇ ಕೊಂದು ಸರ್ವ ಸ್ವಾತಂತ್ರವನೇ ಸೆರೆಮನೆಯಲ್ಲಿಟ್ಟು. ತನ್ನ ರಾಜಕೀಯ ಹಿತಾಸಕ್ತಿಗಾಗಿ ಡಾ.ಬಿ.ಆರ್‌.ಅಂಬೇಡ್ಕರವರಿಗೆ ಸಂವಿದಾನಕ್ಕೆ ರಾಷ್ಟ್ರಕ್ಕೆ  ಅಪಮಾನವೆಸಗಿದ ಕ್ರೂರ ಕಾಂಗ್ರೇಸನ ಆ ನಡೆಯನ್ನು ವಿರೋದಿಸಿ ಅಂದಿನ ದಿನಗಳಲ್ಲೇ ಚಳುವಳಿಗಳು ಪ್ರಾರಂಭವಾದವು ನೂರಾರು ಜನ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ಲಕ್ಷಾಂತರ ಜನ ಸೆರೆಮನೆವಾಸ ಮಾಡಿದರು.ಅದಲ್ಲರ ಫಲವಾಗಿ ಮತ್ತೆ ನಮ್ಮ ದೇಶವು ಮರುಕಳಿಸಬಾರದೆಂಬ ಕಾರಣದಿಂದ ಪ್ರತಿವರ್ಷವೂ ಜೂನ್ 25 ರಂದು ನಮ್ಮ ಬಿಜೆಪಿ ಪಕ್ಷವು ಕರಾಳ ದಿನವನ್ನು  ಆಚರಸುತ್ತದೆ. 


ಸುದ್ದಿ ಓದಿ