ದಾನೇಶ್ವರಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ವಾರ್ಷಿಕ ಸಭೆ
ಘಟಪ್ರಭಾ 26: ಸ್ಥಳೀಯ ದಾನೇಶ್ವರಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಘಟಪ್ರಭಾ ಇದರ 11ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಶುಕ್ರವಾರ ಸಹಕಾರಿಯ ಕಚೇರಿಯಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಸಂಸ್ಥಾಪಕ ರಮೇಶ್ ಮಾರುತಿ ಅಲ್ಲಕನೂರ್ ವಹಿಸಿ ಮಾತನಾಡುತ್ತ, ಸಹಕಾರಿಯೂ ಉತ್ತಮ ಸಾಧನೆಯನ್ನು ಮಾಡುತ್ತಾ ಗ್ರಾಹಕರಿಗೆ ಅನೇಕ ಸೌಲತ್ತುಗಳನ್ನು ಒದಗಿಸಿ ಬಡವರಿಗೆ ಸಣ್ಣ ವ್ಯಾಪಾರಸ್ಥರಿಗೆ ಸಾಲದ ಸೌಲಭ್ಯವನ್ನು ಒದಗಿಸುತ್ತ ಉತ್ತಮವಾಗಿ ಕೆಲಸ ಮಾಡುತ್ತಿದೆ.
ಸಹಕಾರಿಯೂ ವರದಿ ವರ್ಷದಲ್ಲಿ 45 ಕೋಟಿ 42 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿ ವರದಿ ವರ್ಷದಲ್ಲಿ 4 ಕೋಟಿ 88 ಲಕ್ಷದವರೆಗೆ ಸಾಲವನ್ನು ಹಂಚಿ 6 ಕೋಟಿ 21 ಲಕ್ಷದವರೆಗೆ ಠೇವಣಿಯನ್ನು ಸಂಗ್ರಹಿಸಿ 2 ಕೋಟಿ 28 ಲಕ್ಷ ದವರೆಗೆ ಗೊಂತಾವನೆಗಳನ್ನು ಹೊಂದಿದ್ದು, ಸಹಕಾರಿಯು ವರದಿ ವರ್ಷದಲ್ಲಿ 27 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ವರದಿ ವರ್ಷದಲ್ಲಿ ಸಹಕಾರಿಯ ಸದಸ್ಯರಿಗೆ ಶೇ. 15 ಡಿವಿಡೆಂಡ್ ಹಂಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ಉತ್ತಮ ಸಾಧನೆ ಮಾಡಿದ ನಿಮಿತ್ಯ ಅಧ್ಯಕ್ಷರಾದ ಕಾಶಪ್ಪ ಕೋರಿ ಹಾಗೂ ಉಪಾಧ್ಯಕ್ಷ ಶಿವಾನಂದ ಪಾಟೀಲ ಅವರನ್ನು ಸತ್ಕರಿಸಲಾಯಿತು.
ಸಹಕಾರಿಯ ನಿರ್ದೇಶಕ ರಮೇಶ್ ಪಾಟೀಲ, ಮಹಾದೇವ ಮಾಳ್ಗೆ, ಸೋಮಗೌಡ ಶಿರಟ್ಟಿ, ಮಲ್ಲಿಕಾರ್ಜುನ ಗುಡಿಸಿ, ಕೆಂಪಣ್ಣ ಚೌಕಶಿ, ಬಸನಗೌಡ ಪಾಟೀಲ, ಬಾಳವ್ವ ಅಲಕ್ನೂರ್, ಗಿರಿಜಾ ಪಾಟೀಲ, ರೂಪಾ ಅಲಕನೂರ, ರೇಖಾ ಅಲಗುಂಡಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.