ಶಿಗ್ಗಾವ್

ಪದವಿ ವಿದ್ಯಾರ್ಥಿನಿಯರಿಂದ ದೊಡ್ಡಾಟದ ನೃತ್ಯ ಪ್ರೀತಿ

ಪದವಿ ವಿದ್ಯಾರ್ಥಿನಿಯರಿಂದ ದೊಡ್ಡಾಟದ ನೃತ್ಯ ಪ್ರೀತಿ

ಶಿಗ್ಗಾವಿ 11:  ತಂತ್ರಜ್ಯಾನದ ಭರಾಟೆಯಲ್ಲಿ ಅನೇಕ ಜಾನಪದ ಮತ್ತು ಪ್ರದರ್ಶಕ ಕಲೆಗಳು ನಿಜಕ್ಕೂ ಅಳಿವಿನಂಚಿನಲ್ಲಿವೆ,  ಯುವ ಸಮುದಾಯ ಪ್ಯಾಷನ್ ಜಗತ್ತಿಗೆ ಆಕರ್ಷಿತರಾಗಿ ರಂಗಪ್ರಯೋಗಗಳು ಅದರಲ್ಲು ಬಯಲಾಟದೆಡೆಗೆ ನೇಪಥ್ಯಕ್ಕೆ ಜಾರುತಲಿವೆ, ಶಾಲಾ, ಕಾಲೇಜು ವಿದ್ಯಾರ್ಥಿಳಿಗೆ ಮತ್ತು ಯುವಕ, ಯುವತಿಯರಿಗೆ ತನ್ಮಯತೆಯಿಂದ ಪಾಲ್ಗೊಳ್ಳುವಂತೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನ ಆಯೋಜಿಸಿ ಅವಕಾಶಗಳನ್ನು ಕಲ್ಪಿಸಿದೆ ಕಲೆಗಳ ಮರು ಸ್ಥಾಪನೆಗೆ ಕಾರಣವಾಗಿದೆ ಎಂದರೆ ತಪ್ಪಾಗದು, 

ದೊಡ್ಡಾಟ (ಬಯಲಾಟ) ಕಲೆಯನ್ನು ತಾಲೂಕಿನ ಆನೇಕ ಕಲಾವಿದರು ನಿರಂತರವಾಗಿ  ಜಿವಂತವಾಗಿಟ್ಟಿದ್ದಾರೆ,  ಮಹಿಳೆಯರು ಮನಸ್ಸು ಮಾಡಿದರೆ ಎನನ್ನಾದರು ಸಾಧಿಸುವರು ಎಂಬುದಕ್ಕೆ ಶಿಗ್ಗಾವಿಯ ಕಲೆಯ ಒಲವಿನ ಪದವಿ ವಿದ್ಯಾರ್ಥಿನಿಯರು ಕಾಲಿಗೆ ಗೆಜ್ಜೆಕಟ್ಟಿ, ಮೈತುಂಬ ವೇಷಭೂಷಣ ಧರಿಸಿ, ಸುಂದರವಾದ ಮುಖವರ್ಣಿಕೆ ಮಾಡಿಕೊಂಡು “ಧಿಥೈ ತಯ್ಯ ಧಿಥೈ ಗಳ ತಾಳದ ಗತ್ತು ಗೈರತ್ತಿನ” ಹೆಜ್ಜೆಹಾಕಿ ಯುವ ಸೌರಭ ಕಾರ್ಯಕ್ರಮದಲ್ಲಿ ದೊಡ್ಡಾಟ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಚಪ್ಪಾಳೆಗೆ ಸಾಕ್ಷೀಯಾಗಿದ್ದಾರೆ, 

ನೃತ್ಯದಲ್ಲಿ ವಿದ್ಯಾರ್ಥಿನಿಯರರಾದ ಕು.ಭುವನೇಶ್ವರಿ ದುಂಡಿಗೌಡ್ರ ತಂಡದ ವೈಷ್ಣವಿ ಬಿಂದ್ಲಿ, ಉಮಾ ಮಂಡಕ್ಕಿ, ಕಾವ್ಯಾ ಅಂಗಡಿ, ಸಂಜನಾ ಬಂಡಿವಡ್ಡರ, ಮಹೇಶ್ವರಿ ಗೊಟಗೋಡಿ ಕಥೆಗಾರ ಗೋವಿಂದಪ್ಪ ತಳವಾರ, ಶಿವಲಿಂಗಪ್ಪ ಸೋರಟೂರ ಹಾರೋ​‍್ಮನಿಯಂ, ಚಂದ್ರಶೇಖರ ಕಮ್ಮಾರ ಮೃದಂಗ, ಮುದಕಪ್ಪ ಭಜಂತ್ರಿ ಶಹನಾಯಿ, ನೇಪತ್ಯದಲ್ಲಿ ಶಂಕರ ಅರ್ಕಸಾಲಿ, ಕ.ಜಾ.ವಿ.ವಿ ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪವನರ, ಯಲ್ಲಪ್ಪ ತಳವಾರ ಕಾರ್ಯಕ್ರಮಯಶಸ್ಸಿಗೆ ಕಾರಣರಾದರು. 

ಭಾಕ್ಸ ಸುದ್ದಿ : ಅಸಂಖ್ಯ ಜಾನಪದ ಕಲೆಗಳನ್ನ ಉಳಿಸಿ ಬೆಳಸಬೇಕಾಗಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೈಕಟ್ಟಿ ಕುಳಿತಿದೆ, ಸಂಸ್ಕೃತಿ ಇಲಾಖೆ ಅನೇಕ ಕಾರ್ಯಕ್ರಮಗಳನ್ನ ಆಯೋಜಿಸಿ ಯುವ ಜನತೆಯನ್ನ ಕಲಾವಿದರನ್ನಾಗಿ ಮಾಡುತ್ತಿದೆ.  

ಶಂಕರ ಅರ್ಕಸಾಲಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ 


ಸುದ್ದಿ ಓದಿ