ಯರಗಟ್ಟಿ

ಯರಗಟ್ಟಿಗೆ ಪೊಲೀಸ್ ಠಾಣೆ ಮಂಜೂರಾತಿ ಆಗ್ರಹಿಸಿ ಕರವೇ ಡಿಎಸ್ಎಸ್ ಮನವಿ

ಯರಗಟ್ಟಿಗೆ ಪೊಲೀಸ್ ಠಾಣೆ ಮಂಜೂರಾತಿ ಆಗ್ರಹಿಸಿ ಕರವೇ ಡಿಎಸ್ಎಸ್ ಮನವಿ

ಯರಗಟ್ಟಿ 14:: ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣಕ್ಕೆ ಪೊಲೀಸ್ ಠಾಣೆ ಸೇರಿದಂತೆ ಹೆಚ್ಚುವರಿ ಸಿಬ್ಬಂದಿ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆದ ಭೀಮಾ ಶಂಕರ ಗುಳೇದಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಫೀಕ ಡಿ ಕೆ ಮತ್ತು ಡಿಎಸ್ಎಸ್ ಜಿಲ್ಲಾ ಅಧ್ಯಕ್ಷರ ಚಿದಂಬರ ಕಟ್ಟಿಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ನಂತರ ಯರಗಟ್ಟಿ ಟ್ರಾಫಿಕ್ ಜಾಮ್ ಸಮಸ್ಯೆ ಸಿಬ್ಬಂದಿ ಕೊರತೆಯ ಬಗ್ಗೆ ಮನವರಿಕೆ ಮಾಡಲಾಯಿತು.ಮತ್ತು ಇದೇ ವೇಳೆ ನೂತನ ಎಸ್ಪಿ ಭೀಮಾ ಶಂಕರ ಗುಳೇದಯವರಿಗೆ ಕರವೇ ಹಾಗೂ ಡಿಎಸ್ಎಸ್ವತಿಯಿಂದ ಸನ್ಮಾನ ಮಾಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.ಎಸ್ಪಿ ಭೀಮಾ ಶಂಕರ ಗುಳೇದ ಮಾತನಾಡಿದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ನಾಳೆ ಮುಖ್ಯಮಂತ್ರಿ ಸಭೆ ಇದೆ ಆ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದು ಅತೀ ಶೀಘ್ರದಲ್ಲಿ ಯರಗಟ್ಟಿಗೆ ಪೊಲೀಸ್ ಠಾಣೆ ಮಂಜೂರು ಮಾಡಿಸಲಾಗುವುದು ಎಂದರು 

ಸುದ್ದಿ ಓದಿ