ಬ್ಯಾಡ್ಗಿ

ಪಾಲಿಕ್ಲಿನಿಕ್‍ನ ಉಪ ನಿರ್ದೇಶಕ ಡಾ.ಗೋಪಿನಾಥ್‍ರವರಿಗೆ ಸನ್ಮಾನ

ಪಾಲಿಕ್ಲಿನಿಕ್‍ನ ಉಪ ನಿರ್ದೇಶಕ ಡಾ.ಗೋಪಿನಾಥ್‍ರವರಿಗೆ ಸನ್ಮಾನ

ಬ್ಯಾಡಗಿ: ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಕೀಯ ಸಂಘ ಮತ್ತು ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಿವೃತ್ತಿಯಾದ ಪಶು ಸಂಗೋಪನಾ ಇಲಾಖೆ ಜಿಲ್ಲಾ ಪಾಲಿಕ್ಲಿನಿಕ್‍ನ ಉಪ ನಿರ್ದೇಶಕ ಡಾ.ಗೋಪಿನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪಿ.ಎನ್.ಹುಬ್ಬಳ್ಳಿ, ನಿವೃತ್ತಿಗೊಂಡ ಡಾ. ಗೋಪಿನಾಥ್ ಅವರನ್ನು ದಂಪತಿಗಳ ಸಮೇತರಾಗಿ ಗೌರವಿಸಿ ಸನ್ಮಾನಿಸಲಾಯಿತು, ಕಾರ‍್ಯಕ್ರಮದಲ್ಲಿ ಜಿಲ್ಲಾ ಪಶುವೈದ್ಯ ಪರೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಾ.ಯತ್ನಳ್ಳಿ, ಸಹಾಯಕ ನಿರ್ದೇಶಕ ಡಾ.ನರೇಂದ್ರನಾಥ ಚೌಡಾಳ, ಜಿಲ್ಲೆಯ ಎಲ್ಲ ಅಧಿಕಾರಿಗಳು, ಪಶು ವೈದ್ಯರು, ಪರೀಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಓದಿ