ದಿ 18 ರಂದು ಡಿಕೆ ಶಿವಕುಮಾರ ಹುಕ್ಕೇರಿಗೆ
ಸಂಕೇಶ್ವರ 17: ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮೀಟಿಯ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಪ್ರಥಮ ಬಾರಿಗೆ ಹುಕ್ಕೇರಿಗೆ ಆಗಮಿಸುತ್ತಿದ್ದು, ನಾಳೆ ವಿಜಯ ರವದಿ ಫಾರಂ ಹೌಸ್ ಇಲ್ಲಿ ಮಧ್ಯಾಹ್ನ 3 ಗಂಟೆಗೆ ಅವರನ್ನು ಪಕ್ಷದ ಕಾರ್ಯಕರ್ತರಿಂದ ಹಾಗೂ ಪೌರಸನ್ಮಾನ ಕಾರ್ಯಕ್ರಮವು ಜರುಗುವುದೆಂದು ಹುಕ್ಕೇರಿಯ ಬ್ಲಾಕ್ ಕಾಂಗೈ ಅಧ್ಯಕ್ಷ ವಿಜಯ ರವದಿ ಅವರು ತಿಳಿಸಿದರು.
ಡಿ.ಕೆ.ಶಿವಕುಮಾರ ಅವರ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ಸಿನ ಮಾಜಿ ಸಚಿವ ಎ.ಬಿ.ಪಾಟೀಲರು ಭಾಗವಹಿಸಿ ಮಾತನಾಡುತ್ತ ನಾಳೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಇವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮಳೆಯ ಅಭಾವದಿಂದ ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗಿದ್ದು, ಕೇಂದ್ರ ಸರ್ಕಾರದವರು ಕಲ್ಲಿದ್ದಲು ಪೂರೈಸಲು ಕೇಳಿದಾಗ ಕೇಂದ್ರ ಸರ್ಕಾರವು ಹಿಂದೇಟು ಹಾಕುತ್ತಿದೆ. ಮಳೆಯ ಅಭಾವದಿಂದ ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಸರ್ಕಾರ ಯೋಜನೆಯ ಸೌರ ಶಕ್ತಿಯನ್ನು ಕೂಡ್ರಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರಿಗೆ 80 ಪ್ರತಿಶತ ಅನುದಾನ ನೀಡುತ್ತವೆ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿಡಕಲ್ ಜಲಾಶಯದ ನೀರಿನ ಗೇಟ್ದಲ್ಲಿ ಹೊರ ಬರುತ್ತಿರುವ ಹೊಸ ತಂತ್ರಜ್ಞಾನದ ಉಪಕರಣಗಳನ್ನು ಹಾಗೂ ಮಾನ್ಯೂಲ್ಗಳನ್ನು ಬಳಸಿದರೆ ಹಿಡಕಲ್ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ ಮತ್ತು ಎಲ್ಲಿಗೆ ನೀರು ಹರಿಸಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಎಲ್ಲರೂ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಣಗಲಾ ಗ್ರಾಮದ ಪಕ್ಕದಲ್ಲಿ ಓದ್ಯೋಗಿಕ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಕಣಗಲಾ ಮತ್ತು ಕರಜಗಾ ಗ್ರಾಮದಲ್ಲಿ ಇನ್ನೂ 500 ಎಕರೆ ಭೂಮಿಯನ್ನು ಓದ್ಯೋಗಿಕ ಪ್ರದೇಶಕ್ಕಾಗಿ ತೆಗೆದುಕೊಂಡಿದ್ದು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಭಾರಿ ಪ್ರಮಾಣದಲ್ಲಿ ದೊರೆಯುತ್ತವೆ ಎಂದು ಎ.ಬಿ.ಪಾಟೀಲರು ಹೇಳಿದರು.
ಅಡವಿ ಸಿದ್ಧೇಶ್ವರ ಮತ್ತು ಶಂಕರಲಿಂಗ ಯಾತ ನೀರಾವರಿ ಯೋಜನೆಯನ್ನು ಸಿದ್ದರಾಯಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದರು ಎಂದು ಎ.ಬಿ.ಪಾಟೀಲರು ಹೇಳಿದರು.
ಕಾರ್ಯಕರ್ತರು ದಿವಂಗತ ಉಮೇಶ ಕತ್ತಿ ಸಚಿವರಿದ್ದಾಗ ಈ ಯೋಜನೆಯನ್ನು ಬದಲು ಮಾಡಿ ದಿಕ್ಕೇ ತಪ್ಪಿಸಿದ್ದಾರೆಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿ ಈ ಯೋಜನೆಯ ನೀರನ್ನು ನೇರ್ಲಿ ಗ್ರಾಮದ ಗುಡ್ಡಕ್ಕೆ ಒಯ್ದು ತಮ್ಮ ಸ್ವಂತ 200-300 ಎಕರೆ ಭೂಮಿಗೆ ನೀರನ್ನು ಕಲ್ಪಿಸಿ ಬೃಹತ್ ಪ್ರಮಾಣದ ಉದ್ದಿಮೆಯನ್ನು ಸ್ಥಾಪಿಸುವ ಹುನ್ನಾರದಲ್ಲಿದ್ದಾರೆಂದು ನೇರವಾಗಿ ಕತ್ತಿ ಸಹೋದರರ ಮೇಲೆ ಕಾರ್ಯಕರ್ತರು ಸಭೆಯಲ್ಲಿ ಹರಿಹಾಯ್ದರು.
ಡಾ.ಜಯಪ್ರಕಾಶ ಕರಜಗಿ, ಸಂಕೇಶ್ವರ ಬ್ಲಾಕ್ ಕಾಂಗೈ ಅಧ್ಯಕ್ಷ ಸಂತೋಷ ಮುಡಶಿ, ಶಾನುಲ್ಲಾ, ದೀಲೀಪ ಹೊಸಮನಿ, ಅಣ್ಣಾಸಾಹೇಬ ಪಾಟೀಲ, ರೇಖಾ ಚಿಕ್ಕೋಡಿ ಸೇರಿದಂತೆ ಇನ್ನುಳಿದ ಘಟಾನುಘಟಿ ನಾಯಕರು ಉಪಸ್ಥಿತರಿದ್ದರು.