ಶಿಗ್ಗಾವ್

05ರಂದು ಹಾನಗಲ್ಲಗೆ ಡಿ.ಕೆ ಶಿವಕುಮಾರ

05ರಂದು ಹಾನಗಲ್ಲಗೆ ಡಿ.ಕೆ ಶಿವಕುಮಾರ

ಲೋಕದರ್ಶನ ವರದಿ 

ಶಿಗ್ಗಾವಿ 04: ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ದಿ. 05ರಂದು ಹಾನಗಲ್ಲ ಪ್ರವಾಸ ಕೈಗೊಂಡಿದ್ದು ಹುಬ್ಬಳ್ಳಿಯಿಂದ ಶಿಗ್ಗಾವಿ ಮುಖಾಂತರ ಬಂಕಾಪೂರ ಮಾರ್ಗವಾಗಿ ಹಾನಗಲ್ಲಿ ನೆಡೆಯುವ ನೂತನ ಶಾಸಕರಾಗಿ ಆಯ್ಕೆಯಾಗಿರುವ ಶ್ರೀನಿವಾಸ ಮಾನೆ ಅವರ ವಿಜಯೋತ್ಸವ ಸಭೆಯಲ್ಲಿ ಭಾಗಿಯಾಗಿ ಚುನಾವಣೆಯಲ್ಲಿ ಭಾಗವಹಿಸಿ ಶ್ರಮಿಸಿ ಪಕ್ಷದ ಅಭ್ಯರ್ಥಿಯ ವಿಜಯಕ್ಕೆ ಕಾರಣರಾದ ಎಲ್ಲಾ ಹಿರಿಯ ಮುಖಂಡರು, ಚುನಾವಣಾ ವೀಕ್ಷಕರು, ಸಂಯೋಜಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂದುಗಳಿಗೆ  ಕೃತ್ಯಜ್ಞತೆ ತಿಳಿಸಲು ಆಗಮಿಸುತ್ತಿದ್ದು ಕಾಂಗ್ರೇಸ ಪಕ್ಷದ ಕಾರ್ಯಕರ್ತರು ಅಭಿಮಾನಿಗಳ ಪರವಾಗಿ ಹಾರ್ದಿಕ ಸ್ವಾಗತ ಕೋರುತ್ತೇವೆ. 

ಶಿಗ್ಗಾವಿ ಅಧ್ಯಕ್ಷ ಎಂ.ಎನ್‌.ವೇಂಕೋಜಿ, ಸವಣೂರ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೆ ನಿರಂತರವಾಗಿ ಎಲ್ಲರನ್ನು ಒಗ್ಗಟಾಗಿ ತೆಗೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಲ್ಲದೇ ತಮ್ಮ ಸಜ್ಜನಿಕೆಯ ವ್ಯಕ್ತಿತ್ವದಿಂದ ಹೆಸರಾಗಿರುವ ಕಾರ್ಯಾದ್ಯಕ್ಷ ಸಲೀಂ ಅಹ್ಮದ ಅವರು ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಪತ್ರ ರವಾನೆ ಮಾಡಿದ್ದು ಇದು ಪ್ರತಿಯೊಬ್ಬ ಕಾಂಗ್ರೇಸ ಕಾರ್ಯಕರ್ತರಿಗೂ ಸ್ಪೂರ್ತಿಯಾಗಿದ್ದು ಅದಕ್ಕಾಗಿ ಅವರಿಗೂ ತಾಲೂಕ ಕಾಂಗ್ರೇಸ ಮುಖಂಡ ಮಂಜುನಾಥ ಮಣ್ಣಣ್ಣವರ  ಸಹ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. 


ಸುದ್ದಿ ಓದಿ