ತಾಲೂಕಿನ ವೈದ್ಯಕೀಯ ಸಂಘದ ಜೊತೆ ಸಭೆ ಮಾಡಿದ ಡಿಸಿಎಮ್ ಸವದಿ
ಅಥಣಿ 12: ಪಟ್ಟಣದಲ್ಲಿ ತುರ್ತು ಸಭೆ ಕರೆದು ಚರ್ಚೆ ನಡೆಸಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಖಾಸಗಿ ವೈದ್ಯರು, ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ರಾಜ್ಯದ ಮುಖ್ಯಮಂತ್ರಿಗಳ ಬಿ ಎಸ್ ಯಡ್ಯೂರಪ್ಪನವ ನೇತೃತ್ವದ ಸರ್ಕಾರ ಕೋವಿಡ್ ನಂತಹ ತುರ್ತು ಸಂಧರ್ಭದಲ್ಲಿ ಸಾಕಷ್ಟು ಅನುದಾನ ನೀಡುತ್ತಿದ್ದು ವಿದೇಶಗಳಲ್ಲಿ ಈಗಾಗಲೇ ಕೋವಿಡ್ ಮೂರನೆಯ ಅಲೆ ತಾಂಡವ ಆಡುತ್ತಿದ್ದು ಹೊಸ ಕೋವಿಡ್ ಸೆಂಟರ್ ಗಳನ್ನು ಆರಂಭಿಸುವ ಕುರಿತು ಚಚರ್ಿಸಲಾಯಿತು. ಸದ್ಯದ ತುರ್ತು ಪರಿಸ್ಥಿತಿ ಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಕೋವಿಡ್ ವಿರುದ್ದ ಯುದ್ದ ನಡೆಸಬೇಕಾಗಿದೆ ಅದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿ ಯನ್ನು ಆಯೋಜಿಸುವ ಕೆಲಸ ನಡೆಯಬೇಕಿದೆ ಇದಕ್ಕೆ ತಾಲೂಕಿನ ಖಾಸಗಿ ವೈದ್ಯರು ಸಹಕರಿಸುವ ನಂಬಿಕೆ ಇದೆ ಎಂದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಇಂದು ಅಥಣಿ ತಾಲೂಕಿಗೆ ಸಂಭಂಧಪಟ್ಟ ಕೋವಿಡ್ ನಿಯಂತ್ರಣಕ್ಕೆ ಅಥಣಿ ಗಣ್ಯರು, ವ್ಯಾಪಾರಸ್ಥರು ಮತ್ತು ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಭೆಯನ್ನು ಮಾಡಿದ್ದೇವೆ. ತಾಲ್ಲೂಕಿನಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ ಇದನ್ನು ತಡೆಯಲು ಹೋಮ್ ಐಸೋಲೆಷನ್ ಇರುವ ಜನರಿಗೆ ಸರ್ಕಾರಿ ಕಟ್ಟಡದಲ್ಲಿ ಔಷಧಿ ಮತ್ತು ಚಿಕಿತ್ಸೆ ಕೊಡುವ ಚಿಂತನೆ ನಡೆದಿದೆ. ಈಗಾಗಲೇ ಅಥಣಿ ಪಟ್ಟಣದ ನಾಲ್ಕು ಖಾಸಗಿ ಆಸ್ಪತ್ರೆಗಳು, ಕೋವಿಡ್ ಆಸ್ಪತ್ರೆಗಳಾಗಿ ಮಾಪರ್ಾಡಾಗಿವೆ ಸರ್ಕಾರಿ ಆಸ್ಪತ್ರೆ ಯಲ್ಲಿ ಕೋವಿಡ್ ಸೊಂಕಿತ ಜನರ ಹೆಚ್ಚಳದಿಂದಾಗಿ ಬೆಡ್ ಪುಲ್ ಆಗಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಬೆಡ್ಗಳಿಗಾಗಿ ಹೊಸ ಕೋವಿಡ್ ಕೇಂದ್ರ ಆರಂಭಿಸಲು ಮತ್ತು ಮುಂದಿನ ಪರಿಹಾರಗಳ ಚರ್ಚೆ ಮಾಡಿದ್ದೇವೆ. ಅಥಣಿಯಲ್ಲಿ ಸಕರ್ಾರದಿಂದ ಬರುವ ಔಷಧಗಳು ಕೊರತೆ ಆಗದಂತೆ ಸರಿಯಾದ ಸಮಯದಲ್ಲಿ ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದೇವೆ.
ಅಲ್ಲದೆ ಆಕ್ಸಿಜನ್ ಕೊರತೆಯನ್ನು ಕೂಡ ನೀಗಿಸಿದ್ದೇವೆ. ರೆಮಡೆಸಿವರ್ ಇಂಜೆಕ್ಷನ್ ಮತ್ತು ಆಕ್ಸಿಜನ್ ಕೊರತೆ ನೀಗಿಸಿದ್ದು ಐವತ್ತು ಬೆಡ್ ಗಳ ಚಿಕಿತ್ಸಾ ಕೇಂದ್ರವನ್ನು ಹೆಚ್ಚಿಸುವ ಚಿಂತನೆ ನಡೆದಿದೆ ಇದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿ, ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲು ಎರಡು ದಿನ ಅಥಣಿಯಲ್ಲೆ ಉಳಿದು ಉಸ್ತುವಾರಿ ನಡೆಸಿ ಕೋವಿಡ್ ಕೇಂದ್ರ ನಿಮರ್ಿಸಿ ಉಚಿತವಾಗಿ ಸೇವೆ ನೀಡುವ ಕೆಲಸ ಆರಂಭಿಸಲಿದ್ದೇವೆ.
ಒಂದು ವಾರ ಅಥವಾ ಹತ್ತು ದಿನಗಳಲ್ಲಿ ತಾಲೂಕಿನಲ್ಲಿ ಸಂಪೂರ್ಣ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಈಗಿರುವ ವ್ಯವಸ್ಥೆಯಲ್ಲಿ ಮೂವತ್ತೈದು ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನ್ ಗಳನ್ನು ಹೆಚ್ಚುವರಿಯಾಗಿ ಖರೀದಿಸಿದ್ದು ಇಂದು ರಾತ್ರಿಯ ಹೊತ್ತಿಗೆ ತಲುಪಲಿವೆ. ಮೂವತ್ತು ಬೆಡ್ ಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕೊಡಲಾಗುತ್ತಿದೆ. ಪುಣೆಯಿಂದ ಮೂವತ್ತೈದು ಏಳು ಲೀಟರ್ ಕೆಪಾಸಿಟಿ ಮಷಿನ್ ಇನ್ನೂ ಹತ್ತು ಮಷೀನ್ ದೆಹಲಿಯಿಂದ ಬರಲಿವೆ ಸುಮಾರು ಎಂಬತ್ತು ಸಾವಿರ ರೂಪಾಯಿ ಒಂದು ಮಷಿನ್ ಮೌಲ್ಯ ಇದೆ. ಅಷ್ಟೇ ಅಲ್ಲದೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್ ಪ್ರೊಡಕ್ಷನ್ ಯುನಿಟ್ ಇರುವ ಪ್ಲಾಂಟ್ ಮಾಡಲಾಗುತ್ತಿದೆ ದಿನವೊಂದಕ್ಕೆ ಸುಮಾರು 390 ಲೀಟರ್ ಉತ್ಪಾದನೆ ಆಗುವ ನಾಲ್ಕು ನೂರ ಬೆಡ್ ಗಳಿಗೆ ಉಪಯೋಗವಾಗಲಿದೆ ಯಾವುದೇ ಕಾರಣಕ್ಕೂ ಜನರು ಭಯಪಡಬಾರದು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕ್ಷೇತ್ರದ ಜನತೆಯೊಂದಿಗೆ ನಾವಿದ್ದೇವೆ ಎಂದರು.
ಈ ವೇಳೆ ಡಿವೈಎಸ್ಪಿ ಎಸ್. ವಿ. ಗಿರೀಶ್, ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ, ತಾಪಂ ಅಧಿಕಾರಿ ರವಿ ಬಂಗಾರಪ್ಪನವರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಉಪತಹಶಿಲ್ದಾರ ಮಹದೇವ ಬಿರಾದಾರ, ಖಾಸಗಿ ವೈದ್ಯರಾದ ಡಾ. ಮಲ್ಲಿಕಾಜರ್ುನ ಹಂಜಿ, ಡಾ ನಂದೀಶ್ ತೇರದಾಳ, ಡಾ. ರವಿ ಪಾಂಗಿ, ಡಾ. ಅವಿನಾಶ್ ನಾಯಕ, ಮತ್ತು ಸಕರ್ಾರಿ ಆಸ್ಪತ್ರೆಯ ಎಸ್.ಬಿ. ಕನಮಡಿ, ತಾಲ್ಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ, ಅರವಿದರಾವ ದೇಶಪಾಂಡೆ, ಶಿವಕುಮಾರ್ ಸವದಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.