ನೂತನ ಶಾಲೆಗೆ- ಮನೆಗಳಿಗೆ ನೀರು ಹೋಗಿರುವ ಸ್ಥಳಗಳಿಗೆ ಡಿಸಿ ಭೇಟಿ
ಜಮಖಂಡಿ 26: ನಗರದ ಮೈಗೂರ ರಸ್ತೆ ಗುಬ್ಬಾರಾಯ ಕಾಲೊನಿ ನೆಲಮಹಡಿಯಲ್ಲಿರುವ ಸರ್ವೋದಯ ಕಿವುಡು ಮತ್ತು ಮೂಕ ಮಕ್ಕಳ ವಸತಿ ನಿಲಯಕ್ಕೆ ಡಿಸಿ,ಎಸಿ, ತಹಶೀಲ್ದಾರ ಭೇಟಿ ನೀಡಿದರು. ಅಲ್ಲಿನ ಗಬ್ಬುವಾಸನೆಯಿಂದ ಮುಗು ಮುಚ್ಚಿಕೊಂಡರು. ಈ ಸಂಸ್ಥೆ ಯಾರದು ಎಂದು ಕೋಪಗೊಂಡ ಡಿಸಿ,
ಸರ್ವೋದಯ ಕಿವುಡು ಮತ್ತು ಮೂಕ ಮಕ್ಕಳ ವಸತಿ ನಿಲಯದ ಶಾಲೆ ಹಾಗೂ ಹಳೆ ಕೆಎಲ್ಇ ಆಸ್ಪತ್ರೆಯ ಕೆಳಗಿನ ಬಾಲಕಿಯರ ವಸತಿ ನಿಲಯ ಮತ್ತು ರಸಕಾರಿ ನೂತನ ಶಾಲೆಗೆ ಹಾಗೂ ಮನೆಗಳಿಗೆ ನೀರು ಹೋಗಿರುವ ಸ್ಥಳಗಳಿಗೆ ಡಿಸಿ ಕೆ,ಜಾನಕಿ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ನೀರು ನುಗ್ಗಿರುವ ಎರಡು ಹಾಸ್ಟೆಲ್ಗಳಿಗೆ ಭೇಟಿ ನೀಡಿ, ಸರ್ವೋದಯ ಕಿವುಡು ಮತ್ತು ಮೂಕ ಮಕ್ಕಳ ವಸತಿ ನಿಲಯದಲ್ಲಿ ಗಬ್ಬುವಾಸನೆಯಿಂದ ಕೂಡಿದೆ. ಇಲ್ಲಿ ದನ,ಕರುಗಳು ಹಾಗೂ ಕೋಳಿಗಳು ಸಹ ವಾಸಿಸುವುದಿಲ್ಲ. ಇಂತಹ ಕೋಣೆಯಲ್ಲಿ ಮಕ್ಕಳು ವಾಸ ಮಾಡುತ್ತಾರೆ ಎಂದರೆ ನಿಮ್ಮಗೆ ನಾಚಿಕೆಯಾಗಬೇಕು. ನಿಮ್ಮ ಮಕ್ಕಳಿಗೆ ಇದೆ ಪರಿಸ್ಥಿತಿ ಬಂದಿರೆ ಸುಮ್ಮನೆ ಇರುತ್ತಿರಾ. ನಿಮ್ಮಗೆ ಮಕ್ಕಳ ಶಾಪ ತಟ್ಟುತ್ತದೆ. ದೇವರು ಮೆಚ್ಚುವುದಿಲ್ಲ ಎಂದು ಖಡಕ್ಕಾಗಿ ಅಲ್ಲಿನ ವಾರ್ಡನಗೆ ಎಚ್ಚರಿಕೆ ಮಾತನ್ನು ನೀಡಿದರು.
ನಿಮ್ಮಗೆ ಮಕ್ಕಳು ಎಷ್ಟು ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ವಾರ್ಡನ ಎರಡು ಮಕ್ಕಳು ಎಂದನ್ನು. ಅವರು ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿದ್ದಾರಾ ಹೇಗೆ ಎಂದು ಪ್ರಶ್ನೀಸಿದರು. ಅದಕ್ಕೆ ಉತ್ತರಿಸಿದ ವಾರ್ಡನ, ಸರಕಾರಿ ಶಾಲೆಯಲ್ಲಿ ಎಂದ, ಅದಕ್ಕೆ ಕೋಪಗೊಂಡ ಡಿಸಿ, ನಾನು ಸರಕಾರಿ ಶಾಲೆಯಲ್ಲಿ ಕಲಿತ್ತಿದ್ದು ಕನಪ್ಪ ಅದನ್ನು ಎನ್ನು ಹೇಳುತ್ತಿಯಾ ನೀನು. ಮೊದಲು ಮೂಕ,ಕಿವುಡ ಮಕ್ಕಳ ಪರಿಸ್ಥಿತಿ ನೋಡು. ಎಲ್ಲ ಇದ್ದಾರೆ ನಿಮ್ಮ ಸಂಸ್ಥೆಯ ಅಧ್ಯಕ್ಷ ಎಂದರು. ಅದಕ್ಕೆ ಆತ ಬೆಂಗಳೂರನಲ್ಲಿ ಇದ್ದಾರೆ ಎಂದ. ಮತ್ತೇ ಕೋಪಗೊಂಡ ಡಿಸಿ. ಈ ಕಟ್ಟಡದಲ್ಲಿ ಸರಿಯಾಗಿ ಗಾಳಿ ಬೆಳಕು ಬರುವದಿಲ್ಲ, ಮಕ್ಕಳು ಹೇಗೆ ಇರುತ್ತಾರೆ ಎಂದರು.
ನೆಲಮಹಡಿಯಲ್ಲಿ ಉಸಿರು ಗಟ್ಟುವ ಸ್ಥಿತಿ ಇದೆ, ಇಲ್ಲಿ ಹೇಗೆ ಮಕ್ಕಳನ್ನು ಇಟ್ಟಿದ್ದಾರೆ, ಒಂದೇ ಕಟ್ಟಡದಲ್ಲಿ ಮಾತುಬಾರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಹಾಕಿದ್ದಾರೆ, ಸುತ್ತಲಿನ ಜನರಾದರು ಇಂತಹ ಪರಿಸ್ಥಿತಿ ಬಗ್ಗೆ ಗಮನ ಹರಿಸಬೇಕು, ತಾತ್ಕಾಲಿಕವಾಗಿ ವಿದ್ಯಾರ್ಥಿಗಳನ್ನು ಪಂಚಮಸಾಲಿ ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದು ಅಲ್ಲಿ ಭೇಟಿ ನೀಡಿ ಮಾಹಿತಿ ತೆಗೆದುಕೊಂಡರು.
ಹಳೆ ಕೆಎಲ್ಇ ಆಸ್ಪತ್ರೆಯ ಕೆಳಗಿನ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ಇಲ್ಲಿನ ಕಟ್ಟಡದಲ್ಲಿ ಸರಿಯಾಗಿ ಗಾಳಿ ಬೆಳಕು ಬರುವದಿಲ್ಲ, ಬಾಲಕಿಯರಿಗೆ ಸ್ನಾನಕ್ಕೆ ಬಿಸೀನೀರು ಇಲ್ಲ, ಶೌಚಾಲಯದ ವ್ಯವಸ್ಥೆ, ರಾತ್ರಿ ವಾರ್ಡ್ನ ಇಲ್ಲದಿರುವ ಬಗ್ಗೆ ತಿಳಿದುಕೊಂಡು ಸಿಡಿಪಿಓ ಎಸ್.ಸಿ.ಮ್ಯಾಗೆರಿ, ಬಾಲಕಿಯರ ವಸತಿ ನಿಲಯದ ಅಧ್ಯಕ್ಷ ಜೋತಿಬಾ ಘಾಟಗೆಯವರನ್ನು ಹಿಗ್ಗಾ,ಮುಗ್ಗಾ ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿನಿಯರಿಗೆ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು, ನಿಮ್ಮ ಮಕ್ಕಳನ್ನು ಈ ರೀತಿ ನೋಡಿಕೊಳ್ಳುತ್ತಿರಾ ಎಂದರು. ಸರ್ಕಾರದ ಅನುದಾನ ಸ್ಥಗಿತಗೊಳಿಸುವದಾಗಿ ಎಚ್ಚರಿಸಿದರು, ಸಂಜೆಯ ಒಳಗಾಗಿ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.
.ಸರ್ವೋದಯ ಶಾಲೆಗೆ ಭೇಟಿ ನೀಡಿ ಕಿವುಡು ಮತ್ತು ಮೂಖ ಮಕ್ಕಳ ಜೊತೆಗೆ ಇನ್ನಿತರ 7ನೇ ತರಗತಿಯವರೆಗಿನ ಶಾಲೆ ಇದ್ದು, ಆ ಮಕ್ಕಳಿಗೆ ಕಲಿಸಲು ಕೊಠಡಿಗಳಿಲ್ಲ, ಒಂದೇ ಕೋಣೆಯಲ್ಲಿ ಕಟ್ಟಿಗೆ ಬಡಿದುಕೊಂಡು ಎರಡು ತರಗತಿ ನಡೆಸುತ್ತಿದ್ದಾರೆ, ಇದ್ದಿರುವ ಕಟ್ಟಡದ ಮೇಲೆ ಪತ್ರಾಸ್ ಸೀಟ ಹಾಕಿದ್ದು ಮಕ್ಕಳಿಗೆ ತುಂಬಾ ಶಕೆಯಾಗುತ್ತದೆ, ಪ್ಯಾನ್ ವ್ಯವಸ್ಥೆ ಇಲ್ಲ, ಸಿಸಿಟಿವಿ, ಸರಿಯಾದ ಶೌಚಾಲಯ ಇಲ್ಲದಿರುವದಕ್ಕೆ ದಾಖಲಾತಿಗಳನ್ನು ತೆಗೆದುಕೊಂಡು ಬಿಇಓ ಹಾಗೂ ವಿಕಲಚೇತನ ಇಲಾಖೆಯಿಂದ ಮಾಹಿತಿ ತೆಗೆದುಕೊಂಡು ಕ್ರಮ ತೆಗೆದುಕೊಂಡು ಇಂತಹ ಹಾಸ್ಟೇಲ್ ಮತ್ತು ಶಾಲೆಗಳ ಅನುಮತಿ ರದ್ದು ಮಾಡಲು ಸರ್ಕಾರಕ್ಕೆ ಕಳಿಸಲಾಗುವದು ಎಂದರು.
ಎಸಿ ಶ್ವೇತಾ ಬೀಡಿಕರ ಮಾತನಾಡಿ, ನೆಲಮಹಡಿಯಲ್ಲಿ ಹಾಸ್ಟೇಲ್ ನಡೆಸಲು ಅನುಮತಿ ಇಲ್ಲ, ನಗರಸಭೆಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ನಡೆಸಲಾಗುತ್ತಿದೆ, ಕಟ್ಟಡ ಮಾಲಿಕರು ಹಾಗೂ ಹಾಸ್ಟೇಲ್ ನಡೆಸುವ ಎನ್ಜಿಓ ನವರಿಗೆ ನೋಟಿಸ್ ಜಾರಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.
ನೂತನ ವಿದ್ಯಾಲಯದ ಹತ್ತಿರ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಪರೀಶೀಲನೆ ಮಾಡಿ ಬೈಪಾಸ ರಸ್ತೆ ಮಾಡಿರುವ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಸಭೆ ಮಾಡಿ ಶಾಶ್ವತ ಪರಿಹಾರ ಮಾಡಲು ಸೂಚಿಸಿದರು, ಇದು ಜನವಸತಿ ಪ್ರದೇಶವಾಗಿರುವದರಿಂದ ಪಕ್ಕದಲ್ಲಿರುವ ಲಕ್ಕನಕೆರೆಯಲ್ಲಿ ಎರಡು ಮೊಸಳೆಗಳಿವೆ ಹಲವಾರು ದಿನದಿಂದ ಅರಣ್ಯ ಇಲಾಖೆಯವರಿಗೆ ಹೇಳಿದರು ಹಿಡಿದಿರುವದಿಲ್ಲ ಎಂದಾಗ, ಡಿಸಿ ಕೂಡಲೇ ಬಲೆ ಹಾಕಿ ಮೊಸಳೆ ಹಿಡಿದು ನನಗೆ ತಿಳಿಸಬೇಕು ಎಂದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ, ಎಂಜಿನಿಯರ ಎಸ್.ಆರ್.ಬಂಡಿವಡ್ಡರ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಕುಸುಮಾ ಸಪ್ಪಡ್ಲ, ಮಂಜು ದೊಡಮನಿ, ಚೌಗಲಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.