ಕೌಶಲ್ಯ ಯೋಜನೆಗಳ ಸೌಲಭ್ಯ ಪಡೆಯಲು ಯುವ ಜನತೆಗೆ ಡಿಸಿ ಸೂಚನೆ
ಕಾರವಾರ 16: ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಉದ್ಯೋಗಾಂಕ್ಷಿಗಳು ಸರ್ಕಾರದ ಕೌಶಲ್ಯ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ವಿವಿಧ ವಲಯಗಳಲ್ಲಿ ಉದ್ಯೋಗಾವಕಾಶ ಪಡೆದು ಭವ್ಯ ಭಾರತದ ನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯುವ ಜನರಿಗೆ ಸೂಚಿಸಿದ್ದಾರೆ. ಈ ಸಂಬಂಧ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯುವ ಜನತೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗವಕಾಶ ಪಡೆಯಲು ನೆರವಾಗಿರುವ ಸರ್ಕಾರದ ಕೌಶಲ್ಯ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದ್ದಾರೆ.
18 ರಿಂದ 35 ವರ್ಷದೊಳಗಿನ ಪ್ರತಿಯೊಬ್ಬರೂ ಸ್ವಾವಲಂಭಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಸದಾಶಯದೊಂದಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ(ಅಒಏಏಙ) ಹಾಗೂ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಕಒಏಗಿಙ) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ವರ್ಷ 2 ಲಕ್ಷ ಯುವಕ-ಯುವತಿಯರಿಗೆ ಅಂದರೆ ಶೇ. 70ರಷ್ಟು ಯುವ ಜನತೆಗೆ ವೃತ್ತಿ ತರಬೇತಿ ನೀಡಿ ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲಾಗುತ್ತಿದೆ. ಜೊತೆಗೆ ವೃತ್ತಿ ತರಬೇತಿ ಪಡೆದವರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿ ಎಂದಿದ್ದಾರೆ. ಇಲಾಖೆಯಲ್ಲಿ ಚಾಲನೆಯಲ್ಲಿರುವ ವಿವಿಧ ಯೋಜನೆಯಡಿ ವೆಬ್ಸೈಟ್: ತಿತಿತಿ.ಞಠಚಿಟಞಚಿಡಿ.ಛಿಠ <ಣಣಠಿ://ತಿತಿತಿ.ಞಠಚಿಟಞಚಿಡಿ.ಛಿಠ> ನಲ್ಲಿ 9,83,876 ಅಭ್ಯರ್ಥಿಗಳ ಹಾಗೂ 2,870 ತರಬೇತುದಾರರ ಮತ್ತು 4,672 ತರಬೇತಿ ಕೇಂದ್ರಗಳ ಹೆಸರು ನೋಂದಾಯಿಸಿಕೊಂಡಿದೆ. ಅಲ್ಲದೇ ಅಂದಾಜು 77,200 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2,517 ಯುವಕ-ಯುವತಿಯರು ಕೌಶಲ್ಯ ತರಬೇತಿ ಪಡೆದು ಶೇ. 50ಕ್ಕಿಂತ ಹೆಚ್ಚು ಸ್ವ ಉದ್ಯೋಗ ಮತ್ತು ಉದ್ಯೋಗ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರು ಕೌಶಲ್ಯಾಭಿವೃದ್ಧಿ ತರಬೇತಿ ಹೊಂದುವಂತಾಗಬೇಕು ಎಂದಿದ್ದಾರೆ.